ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡಗದ್ದೆ ಉಮೇಶ್ ಎಂಬುವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ನೋಡಿದ ತೋಟದ ಮಾಲೀಕ ಹಾಗೂ ಕಾರ್ಮಿಕರು ಅರೆಕ್ಷಣ ಬೆಚ್ಚಿ ಬಿದ್ದಿದ್ದರು. ಬಳಿಕ ಉರಗ ತಜ್ಞ ಅರ್ಜುನ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾದರು.
ಸೆರೆ ಹಿಡಿದ ಹೆಬ್ಬಾವನ್ನು ಅರ್ಜುನ್ ಸುರಕ್ಷಿತವಾಗಿ ಸ್ಥಳೀಯ ಕಾಂಚೀನಗರದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಈ ಭಾಗದಲ್ಲಿ ಅರಣ್ಯ ಪ್ರದೇಶವಿರುವುದರಿಂದ ನಗರ ಪ್ರದೇಶಕ್ಕೆ ಹಾವುಗಳು ಬರುವುದು ಸಾಮಾನ್ಯವಾಗಿದೆ.