ETV Bharat / state

ವಾಹನ ನೋಂದಣಿಗೆ ನಾವೇಕೆ ಪೆನಾಲ್ಟಿ ಕಟ್ಟಬೇಕು?: ಆರ್​​ಟಿಓ ಅಧಿಕಾರಿಗಳ ನಡೆಗೆ ಆಕ್ರೋಶ - ಚಿಕ್ಕಮಗಳೂರು ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಕೋವಿಡ್​​ ಎರಡನೇ ಅಲೆಯ ಸಂದರ್ಭ ಲಾಕ್​​ಡೌನ್ ಮಾಡುವ ನಾಲ್ಕು ದಿನಗಳ ಮೊದಲು ತೆಗೆದುಕೊಂಡ ವಾಹನಗಳನ್ನು ಲಾಕ್​​ಡೌನ್ ತೆರವು ಮಾಡಿದ ನಂತರ ನೋಂದಣಿ ಮಾಡಲಾಗುತ್ತಿದೆ. ಆದರೀಗ ಆರ್​ಟಿಓ ಸಾರ್ವಜನಿಕರಿಗೆ ಪೆನಾಲ್ಟಿ ಬರೆ ಹಾಕುತ್ತಿದೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikkamagalore
ಆರ್​​ಟಿಓ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
author img

By

Published : Jul 1, 2021, 6:42 PM IST

ಚಿಕ್ಕಮಗಳೂರು: ವಾಹನ ನೋಂದಣಿ ಮಾಡಲು ದಂಡ ಕಟ್ಟಬೇಕು ಎಂದು ಆರ್​​ಟಿಓ ಅಧಿಕಾರಿಗಳು ಸಾರ್ವಜನಿಕರಿಗೆ ತಾಕೀತು ಮಾಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್​​ ಎರಡನೇ ಅಲೆಯ ಸಂದರ್ಭ ಲಾಕ್​​ಡೌನ್ ಮಾಡುವ ನಾಲ್ಕು ದಿನಗಳ ಮೊದಲು ತೆಗೆದುಕೊಂಡ ವಾಹನಗಳನ್ನು ಲಾಕ್​​ಡೌನ್ ತೆರವು ಮಾಡಿದ ನಂತರ ನೋಂದಣಿ ಮಾಡಲಾಗುತ್ತಿದೆ. ಆದರೀಗ ಆರ್​ಟಿಓ ಸಾರ್ವಜನಿಕರಿಗೆ ಪೆನಾಲ್ಟಿ ಬರೆ ಹಾಕುತ್ತಿದೆ.

ಆರ್​​ಟಿಓ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಈ ಬಗ್ಗೆ ಲಕ್ಷ್ಮಣ್ ಎಂಬುವರು ಮಾತನಾಡಿ, 2ನೇ ಅಲೆ ಸಂಬಂಧ ಲಾಕ್‌ಡೌನ್ ಆಗುವ ನಾಲ್ಕು ದಿನದ ಮೊದಲು ನಾನು ಹೊಸ ಕಾರು ತೆಗೆದುಕೊಂಡಿದ್ದೆ. ಅದರ ನೋಂದಣಿಗಾಗಿ ಆರ್​​ಟಿಓಗೆ ಬಂದಾಗ ಇದನ್ನು ಈಗ ಮಾಡಲು ಸಾಧ್ಯವಿಲ್ಲ, ಕಚೇರಿ ಬಂದ್ ಆಗಿದೆ ಎಂದು ಹೇಳಿ ಅಧಿಕಾರಿಗಳು ವಾಪಸ್​​ ಕಳುಹಿಸಿದ್ದರು. ಲಾಕ್​​ಡಾನ್ ಸಡಿಲಿಕೆಯಾದ ನಂತರ ಬಂದು ನಿಮ್ಮ ವಾಹನದ ನೋಂದಣಿ ಮಾಡಿಸಿ ಎಂದು ಹೇಳಿದ್ದಾರೆ. ಅದೇ ಸಂದರ್ಭ ಆನ್​​ಲೈನ್ ಮೂಲಕವೂ ನೀವು ನೋಂದಣಿ ಮಾಡಿಸಬಹುದು ಎಂದು ಅವರೇ ಸಲಹೆ ನೀಡಿದ್ದಾರೆ.

ಈ ಬಗ್ಗೆ ಡೀಲರ್ ಸಂಪರ್ಕಿಸಿದಾಗ ನಮ್ಮ ಕಚೇರಿ ಬಂದ್ ಆಗಿದೆ. ಲಾಕ್‌ಡೌನ್ ಓಪನ್​​ ಆದಾಗ ವಾಹನ ನೋಂದಣಿಗೆ ಬಂದು ಪೆನಾಲ್ಟಿ ಕಟ್ಟಬೇಕು ಎಂದು ಅಧಿಕಾರಿಗಳು ತಾಕೀತು ಮಾಡುತ್ತಿರುವುದಾಗಿ ಹೇಳಿದ್ದಾರೆ. ಹಾಗಾದ್ರೆ, ಇದು ನಮ್ಮ ತಪ್ಪಾ?, ಆರ್​​ಟಿಓ ಇಲಾಖೆ ಖಾಸಗಿ ವಾಹನಗಳಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿದೆ. ಆದರೆ ಈಗ ಪೆನಾಲ್ಟಿ ಕಟ್ಟಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ದಂಧೆಯಾಗಿ ನಡೆಸುತ್ತಿದ್ದಾರೆ ಅವರು ದೂರಿದರು.

ಈ ಬಗ್ಗೆ ಸರ್ಕಾರ ಯಾವುದೇ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಲಾಕ್​​ಡೌನ್‌ನಿಂದ ಉದ್ಯೋಗ, ಆದಾಯವಿಲ್ಲದೆ ಕಂಗೆಟ್ಟಿದೆ. ಇಂತಹ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರಿಯಾದ ಕ್ರಮ ಜರುಗಿಸಬೇಕು. ಜನರಿಂದ ಕಟ್ಟಿಸಿಕೊಂಡಿರುವ ದಂಡ ಹಣವನ್ನು ಹಿಂದಿರುಗಿಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.