ETV Bharat / state

ಶಾಲಾ ಮಕ್ಕಳಿಗೆ ಆಲ್ ದಿ ಬೆಸ್ಟ್ ಹೇಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ - ಶೃಂಗೇರಿಗೆ ಭೇಟಿ ನೀಡಿದ್ದ ರಾಮನಾಥ್ ಕೋವಿಂದ್

ಕಾರಿನಿಂದ ಇಳಿದು ಬಂದು ಶಾಲಾ ಮಕ್ಕಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಈ ವೇಳೆ ಶಾಲಾ ಮಕ್ಕಳು ಸಂತೋಷದಿಂದ ವಂದನೆ ಸಲ್ಲಿಸಿದರು. ಆದರೆ, ರಾಷ್ಟ್ರಪತಿಗಳನ್ನು ನೋಡಲು ಶೃಂಗೇರಿ ಶಾರದಾ ಪೀಠದ ದ್ವಾರ ಬಾಗಿಲಿನಲ್ಲಿ ನಿಂತಿದ್ದ ನೂರಾರು ಸಾರ್ವಜನಿಕರಿಗೆ ಈ ಅವಕಾಶ ಸಿಗದೆ ನಿರಾಶೆಗೊಂಡರು..

President Ramnath Kovind visited sringeri sharada temple
ಶಾರದಾ ದೇಗುಲಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್
author img

By

Published : Oct 8, 2021, 6:21 PM IST

ಚಿಕ್ಕಮಗಳೂರು : ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಕುಟುಂಬ ಸಮೇತರಾಗಿ ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಿ ನಿರ್ಗಮಿಸುವ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಮಕ್ಕಳತ್ತ ಕೈ ಬೀಸಿ ಗಮನ ಸೆಳೆದರು.

ಇಂದು ಜಿಲ್ಲೆಯ ಶೃಂಗೇರಿಯ ಶಾರದಾ ಪೀಠಕ್ಕೆ ಕುಟುಂಬ ಸಮೇತರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಿದ್ದರು. ಶಾರದಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪೀಠದಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ರಾಷ್ಟ್ರಪತಿಗಳನ್ನು ನೋಡಲು ನೂರಾರು ಶಾಲಾ ಮಕ್ಕಳು ಕಾತುರದಿಂದ ಕಾದು ನಿಂತಿದ್ದರು.

ಇದನ್ನು ಗಮನಿಸಿದ ಕೋವಿಂದ್​, ಕಾರಿನಿಂದ ಇಳಿದು ಬಂದು ಶಾಲಾ ಮಕ್ಕಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಈ ವೇಳೆ ಶಾಲಾ ಮಕ್ಕಳು ಸಂತೋಷದಿಂದ ವಂದನೆ ಸಲ್ಲಿಸಿದರು. ಆದರೆ, ರಾಷ್ಟ್ರಪತಿಗಳನ್ನು ನೋಡಲು ಶೃಂಗೇರಿ ಶಾರದಾ ಪೀಠದ ದ್ವಾರ ಬಾಗಿಲಿನಲ್ಲಿ ನಿಂತಿದ್ದ ನೂರಾರು ಸಾರ್ವಜನಿಕರಿಗೆ ಈ ಅವಕಾಶ ಸಿಗದೆ ನಿರಾಶೆಗೊಂಡರು.

ಇದನ್ನೂ ಓದಿ: ಶೃಂಗೇರಿ ಶಾರದಾಪೀಠದಿಂದ ರಾಷ್ಟ್ರಪತಿಗಳ ನಿರ್ಗಮನ: ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.