ETV Bharat / state

ಚಿಕ್ಕಮಗಳೂರು ಇನಾಂ​ ದತ್ತಾತ್ರೇಯ ಪೀಠಕ್ಕೆ ಪ್ರಮೋದ್ ಮುತಾಲಿಕ್ ಭೇಟಿ

author img

By

Published : Dec 27, 2022, 8:07 PM IST

ಇನಾಂ​ ದತ್ತಾತ್ರೇಯ ಪೀಠಕ್ಕೆ ಭೇಟಿ ನೀಡಿದ ಬಳಿಕ ಪ್ರಮೋದ್ ಮುತಾಲಿಕ್ ಮಾತನಾಡಿ, ಇದು ಮೂರು ದಶಕಗಳ ಹೋರಾಟಕ್ಕೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದರು.

pramod muthalik
ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್ ಮಾತನಾಡುತ್ತಿರುವುದು

ಚಿಕ್ಕಮಗಳೂರು: ತಾಲೂಕಿನ ಇನಾಂ​ ದತ್ತಾತ್ರೇಯ ಪೀಠಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಪಾದುಕೆ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದತ್ತ ಪೀಠದಲ್ಲಿ ಅರ್ಚಕರು, ರುದ್ರಾಭಿಷೇಕ, ಶಂಖನಾದ, ಆರತಿ ಇದೆಲ್ಲವನ್ನು ನೋಡಿ, ಕೇಳಿ ನಿಜಕ್ಕೂ ನಾನು ಧನ್ಯನಾದೆ. ಸುದೀರ್ಘ ಹೋರಾಟಕ್ಕೆ ನಿಜವಾದ ಬೆಲೆ ಈಗ ಸಿಕ್ಕಿದೆ. ಅದಕ್ಕೆ ಕಾರಣಕರ್ತರಾದ ರಾಜ್ಯ ಸರ್ಕಾರ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಧನ್ಯವಾದ ತಿಳಿಸಿದರು.

ಮುಸ್ಲಿಂ ಸಮುದಾಯಕ್ಕೊಂದು ಮನವಿ: ಇನಾಂ​ ದತ್ತಾತ್ರೇಯ ಪೀಠಕ್ಕೆ ಸಂಬಂಧಿಸಿ ನಮ್ಮ 30 ವರ್ಷಗಳ ಸುದೀರ್ಘ ಹೋರಾಟಕ್ಕೆ ಈಗ ನಿಜವಾದ ಜಯ ಸಿಕ್ಕಿದೆ. ಸೌಹಾರ್ಧಯುತವಾಗಿ ಒಳಗಡೆ ಪಾದುಕೆ ಪೂಜೆ ನಡೆಯುತ್ತಿದೆ. ಆರತಿ, ರುದ್ರಾಭಿಷೇಕ, ಅರ್ಚನೆ, ಶಂಖನಾದ ಇವೆಲ್ಲವೂ ಆಗುತ್ತಿದೆ. ಇದೆಲ್ಲವೂ ಇಸ್ಲಾಂ ಧರ್ಮೀಯರಾದ ನಿಮಗೆ ನಿಷಿದ್ಧ. ಹೀಗಾಗಿ ನೀವು ದತ್ತಾಪೀಠ ಬಿಟ್ಟು ನಾಗೇನಹಳ್ಳಿಯಲ್ಲಿ ಪೂಜೆ ಮಾಡಿಕೊಳ್ಳಿ. ಅಲ್ಲದೇ ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬದವರಿಗೆ ಗರ್ಭ ಗುಡಿ ಪ್ರವೇಶ ನಿಷೇಧಿಸಬೇಕು. ಖುರಾನ್ ಪ್ರಕಾರ ಇದು ನಿಷಿದ್ಧ. ನೀವಂತೂ ಹೋಗಲೇಬೇಡಿ ಎಂದು ಮನವಿ ಮಾಡಿದರು.

ಕೊರಿಯರ್​ ಮಿಕ್ಸಿ ಬ್ಲಾಸ್ಟ್ ಪ್ರಕರಣ: ಹಾಸನದಲ್ಲಿ ಕೊರಿಯರ್ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದು ಕೂಡ ಭಯೋತ್ಪಾದಕ ಕೃತ್ಯ. ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಪ್ರಕರಣದಂತೆ ಇದೂ ಕೂಡ ಒಂದು ಕುಕೃತ್ಯ. ಶಾರಿಕ್​ ಮುಖಾಂತರ ಕುಕ್ಕರ್​ ಬಾಂಬ್​ ಬ್ಲಾಸ್ಟ್ ಮಾಡಿಸಿದ್ರು. ಇದೀಗ ಮತ್ತೊಂದು ಬಾಂಬ್​ ಬ್ಲಾಸ್ಟ್​ ಹಾಸನದಲ್ಲಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಕೃತ್ಯಗಳು ಸ್ತಬ್ಧವಾಗಿದೆ. ಈ ಕಾರಣಕ್ಕೆ ತಡೆಯಲಾಗದೇ ಇಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣ: ವೈಯಕ್ತಿಕ ದ್ವೇಷದ ಕೃತ್ಯ - ಎಸ್ಪಿ ಸ್ಪಷ್ಟನೆ

ಇತ್ತೀಚೆಗೆ ದತ್ತಪೀಠಕ್ಕೆ ಅರ್ಚಕರ ನೇಮಿಸಿದ್ದ ಸರ್ಕಾರ: ದತ್ತಪೀಠಕ್ಕೆ ಹಿಂದೂ ಧರ್ಮೀಯ ಅರ್ಚಕರನ್ನು ನೇಮಕ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿ, ಡಿಸೆಂಬರ್​ 3ರಂದು ಇಬ್ಬರು ಅರ್ಚಕರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಹಿಂದೂ-ಮುಸ್ಲಿಮರ ಸೌಹಾರ್ದ ಧಾರ್ಮಿಕ ಕೇಂದ್ರವಾಗಿದ್ದ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಕಳೆದ ಮೂರು ದಶಕಗಳಿಂದ ವಿವಾದದ ಕೇಂದ್ರವಾಗಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇತ್ತೀಚೆಗೆ ಸರ್ಕಾರ ನ್ಯಾಯಾಲಯದ ಆದೇಶದನ್ವಯ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕೈಗೊಳ್ಳಬೇಕಾದ ಪೂಜಾ ವಿಧಾನಗಳ ಮೇಲ್ವಿಚಾರಣೆಗಾಗಿ 8 ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿತ್ತು.

ಈ ಸಮಿತಿ ಇತ್ತೀಚೆಗೆ ಸಭೆ ನಡೆಸಿ ಹಿಂದೂ ಅರ್ಚಕರ ನೇಮಕ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ ದತ್ತಪೀಠದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲು ಇಬ್ಬರು ಅರ್ಚಕರನ್ನು ನೇಮಿಸಿದೆ. ಶೃಂಗೇರಿಯ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರದ ಸಂದೀಪ್ ನೇಮಕಗೊಂಡು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ದತ್ತಪೀಠಕ್ಕೆ ಅರ್ಚಕರ ನೇಮಿಸಿದ ಸರ್ಕಾರ: ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.