ಚಿಕ್ಕಮಗಳೂರು: ಮನೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸುಮಾರು 50 ಕೆ.ಜಿ.ಗೂ ಅಧಿಕ ಮಾಂಸ ವಶಪಡಿಸಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಡೂರು ತಾಲೂಕಿನ ಈದ್ಗಾ ನಗರದ ಬಳಿಯ ಅಥಾವುಲ್ಲಾ ಎಂಬುವರ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ. ಕಬ್ಬಿಣದ ಸಲಾಕೆಯೊಂದರಲ್ಲಿ ಮಾಂಸವನ್ನು ನೇತು ಹಾಕಲಾಗಿತ್ತು. ಜೊತೆಗೆ ಎರಡು ಫ್ರಿಡ್ಜ್ಗಳಲ್ಲಿ ಗೋಮಾಂಸ ಇಡಲಾಗಿತ್ತು ಎಂಬುದು ದಾಳಿ ವೇಳೆ ತಿಳಿದುಬಂದಿದೆ.
ಈ ಕುರಿತು ಕಡೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.