ETV Bharat / state

ಲಾಕ್​​ಡೌನ್ ಆದೇಶ ಗಾಳಿಗೆ ತೂರಿ ಕೆರೆ ಮೀನು ಖರೀದಿಗೆ ಮುಗಿಬಿದ್ದ ಜನ

ದೇಶದಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಡುವ ದೃಷ್ಟಿಯಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಹೀಗಿದ್ದರೂ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಯಾರು ಮನೆಯಿಂದ ಹೊರಬರದಂತೆ ಮನವಿ ಮಾಡಲಾಗಿದೆ. ಆದರೆ, ಈ ಎಲ್ಲ ಆದೇಶಗಳನ್ನೂ ಧಿಕ್ಕರಿಸಿ ಅಜ್ಜಂಪುರದಲ್ಲಿ ನೂರಾರು ಜನ ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳದೇ ಕೆರೆ ಮೀನು ಖರೀದಿಗೆ ಆಗಮಿಸಿದ ಘಟನೆ ನಡೆದಿದೆ. .

people gathering to buy fish in between lockdown at chikkamagalore
ಲಾಕ್​​ಡೌನ್ ಆದೇಶ ಗಾಳಿಗೆತೂರಿ ಕೆರೆ ಮೀನು ಖರೀದಿಗೆ ಮುಗಿಬಿದ್ದ ಜನ
author img

By

Published : Apr 20, 2020, 7:25 PM IST

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಈಡೀ ಭಾರತವೇ ಲಾಕ್​ಡೌನ್ ಆಗಿದ್ದು, ಈ ಲಾಕ್​​ಡೌನ್​ಗೆ ಆದೇಶ ಗಾಳಿಗೆ ತೂರಿ ಕೆರೆ ಮೀನು ಖರೀದಿಗಾಗಿ ಜನ ಮುಗಿಬಿದ್ದಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಅಜ್ಜಂಪುರದ ಕಲ್ಕೆರೆ ಗ್ರಾಮದಲ್ಲಿರುವ ಬಳ್ಳೇಕೆರೆಯಲ್ಲಿ ಮೀನು ಹಿಡಿಯಲಾಗಿದೆ.

ಲಾಕ್​​ಡೌನ್ ಆದೇಶ ಗಾಳಿಗೆತೂರಿ ಕೆರೆ ಮೀನು ಖರೀದಿಗೆ ಮುಗಿಬಿದ್ದ ಜನ

ಈ ವೇಳೆ, ಜನರು ಮೀನು ಖರೀದಿಸಲು ನೂರಾರು ಮುಗಿಬಿದ್ದಿದ್ದು ಕಂಡುಬಂದಿದೆ. ಅಲ್ಲದೇ ಇಲ್ಲಿಗೆ ಆಗಮಿಸಿದ ಬಹುತೇಕರು ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರವನ್ನು ಮರೆತು ಮೀನು ಖರೀದಿಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ, ವಿಡಿಯೋ ಮಾಡಲು ಮುಂದಾದಾಗ ಅಂತವರಿಗೆ ಮೀನು ಕೊಡಬೇಡಿ ಎಂದು ಕೆಲವರು ಆಗ್ರಹಿಸಿದ್ದರು.

ಇನ್ನೂ ಕೆಲವು ಸ್ಥಳೀಯರು ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.