ಚಿಕ್ಕಮಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದುದೆ. ಈ ಬಗ್ಗೆ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೋರಾಟ ಮಾಡುವ ಎಲ್ಲಾ ಅಧಿಕಾರ ಇದೆ. ಆದರೆ ಸಂದರ್ಭದ ಬಗ್ಗೆ ಅವರು ಯೋಚನೆ ಮಾಡಬೇಕು ಎಂದಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಆರ್ಥಿಕವಾಗಿ ಅನೇಕ ಸವಾಲುಗಳಿವೆ. ಈಗಾಗಲೇ ಮುಖ್ಯಮಂತ್ರಿಗಳು ಶೇ 8 ರಷ್ಟು ಸಂಬಳ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆಗಳನ್ನು ಕುಳಿತು ಬಗೆಹರಿಸಬಹುದೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದರು.
ಯತ್ನಾಳ್ ಅವರ ಕುರಿತು ಮಾತನಾಡಿದ ಅವರು, "ಯತ್ನಾಳ್ ಅವರ ಬಗ್ಗೆ ಪಾರ್ಟಿ ಗಮನಿಸುತ್ತಿದೆ. ಸಮಯ ಬಂದಾಗ ಯಾರು ಉತ್ತರ ನೀಡಬೇಕು ಅವರು ಕೊಡುತ್ತಾರೆ. ಯಡಿಯೂರಪ್ಪ ನನ್ನ ತಂದೆಯಾದರೂ ಕೂಡ ವಿಜಯೇಂದ್ರ ನನ್ನ ತಮ್ಮನಾದರೂ ಕೂಡ ಯಡ್ಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳು. ವಿಜಯೇಂದ್ರ ಪಕ್ಷದ ಉಪಾಧ್ಯಕ್ಷ. ಅವರದ್ದೇ ಆದಂತಹ ಸಂಘಟನೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಪಕ್ಷಕ್ಕೆ ಮುಜುಗರ ಆಗುವಂತಹ ಕೆಲಸಗಳು ಆಗುತ್ತಿವೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದರು.
ಜೊತೆಗೆ ಈಶ್ವರಪ್ಪನವರ ಬಗ್ಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಈ ಕುರಿತು ಚರ್ಚೆಯಾಗಿದೆ. ಇದಕ್ಕೆ ಯಾರ್ಯೂರು ಪ್ರತಿಕ್ರಿಯೆಗಳು ನೀಡಬೇಕೋ ಅವರು ನೀಡಿದ್ದಾರೆ. ಯಡಿಯೂರಪ್ಪ ನಮ್ಮ ನಾಯಕರು ಎಂದೂ ಅವರೇ ಹೇಳಿದ್ದಾರೆ. ಯತ್ನಾಳ್ ಹಾಗೂ ಈಶ್ವರಪ್ಪನವರ ಹೇಳಿಕೆ ಉಪಚುನಾವಣೆಯ ಮೇಲೆ ಬಿರೋದಿಲ್ಲ. ಜನರು ಪ್ರಜ್ಞಾವಂತರಿದ್ದಾರೆ. ಈ ಸರ್ಕಾರ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕೊವೀಡ್ ಸಂಕಷ್ಟದ ಸಮಯದಲ್ಲಿಯೂ ಮುಖ್ಯಮಂತ್ರಿಗಳು ಒಳ್ಳೆಯ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಹೇಳಿದರು.