ETV Bharat / state

ಇವತ್ತಿಗೂ ನಾನು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದ ಶೃಂಗೇರಿ ಶಾಸಕ: ಬಿಜೆಪಿಯಿಂದ ಟೀಕೆ

author img

By ETV Bharat Karnataka Team

Published : Oct 21, 2023, 8:20 AM IST

ಇವತ್ತಿಗೂ ಕೂಡಾ ನಾನು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಶಾಸಕ ಟಿ ಡಿ ರಾಜೇಗೌಡ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಸರ್ಕಾರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಶಾಸಕ ಟಿ ಡಿ ರಾಜೇಗೌಡ
ಶಾಸಕ ಟಿ ಡಿ ರಾಜೇಗೌಡ
ಶಾಸಕ ಟಿ ಡಿ ರಾಜೇಗೌಡ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ವಿಧಾನಸಭಾ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ''ಇವತ್ತಿಗೂ ಕೂಡ ನಾನು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ. ಲಂಚಕ್ಕೂ.. ಟಿಪ್ಸ್​ಗೂ ಬಹಳ ವ್ಯತ್ಯಾಸವಿದೆ'' ಎಂದು ಶಾಸಕರು ಹೇಳಿದ್ದಾರೆ. ಈ ವಿಡಿಯೋವನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಜ್ಯ ಬಿಜೆಪಿ, ''ಈ ಎಟಿಎಂ ಸರ್ಕಾರದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ'' ಎಂದು ಟೀಕಿಸಿದೆ. ಎರಡು ದಿನಗಳ ಹಿಂದೆ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಟಿ. ಡಿ ರಾಜೇಗೌಡ ಮಾತನಾಡಿದ ವಿಡಿಯೋ ಇದಾಗಿದೆ.

ಕೆರೆ ಮತ್ತು ನೆಮ್ಮಾರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಕೆಲ ವಿಚಾರದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ಈ ವಿಡಿಯೋ ತುಣುಕೊಂದನ್ನು ಬಿಜೆಪಿ ಹಂಚಿಕೊಂಡಿದೆ. ''ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ. ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು'' ಎಂದು ಬಿಜೆಪಿ ಆಗ್ರಹಿಸಿದೆ.

  • #ATMSarkara ದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ.

    ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ.

    ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂ… pic.twitter.com/NFN9eTDiFs

    — BJP Karnataka (@BJP4Karnataka) October 20, 2023 " class="align-text-top noRightClick twitterSection" data=" ">

ಸಭೆಯಲ್ಲಿ ಮುಂದುವರೆದು ಮಾತನಾಡಿದ್ದ ಶಾಸಕ ಟಿ ಡಿ ರಾಜೇಗೌಡ, ಮಲೆನಾಡಿನವರು ಸಹೃದಯಿಗಳು, ಯಾರು ಕೂಡ ಹಾಗೆಯೇ ಕೆಲಸ ಮಾಡಿಸಿಕೊಳ್ಳಲ್ಲ. ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರ ಕೆಲಸ ಮಾಡಿ ಕೊಟ್ಟರೆ ಟಿಪ್ಸ್​ ಕೊಡುತ್ತಾರೆ, ಯಾರು ಹಾಗೆಯೇ ಹೋಗಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಟಿಪ್ಸ್​ಗೂ ಲಂಚಕ್ಕೂ ವ್ಯತ್ಯಾಸ ಇದೆ. ಇವತ್ತಿಗೂ ನಾನು ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಟ್ಟವರುಗೆ ದುಡ್ಡು ಕೊಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐ ಹೇಳಿದೆ, ಆದ್ರೆ ನನ್ನ ವಿಚಾರಣೆಗೆ ಯಾವ ಅಧಿಕಾರಿಯೂ ಬಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.