ಚಿಕ್ಕಮಗಳೂರು : ತಮ್ಮದೇ ಸರ್ಕಾರವಿದ್ದರೂ ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದು ವಿಧಾನಸೌಧದ ಮುಂದೆ ಪ್ರತಿಭಟಿಸಿ ಸುದ್ದಿಯಾಗಿದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಇಂದು ರಿಲ್ಯಾಕ್ಸ್ ಮೂಡ್ನಲ್ಲಿದ್ದರು.
ಅತ್ತಿಗೆರೆ ಗ್ರಾಮದ ದೇವನಗುಲ್ ಸುಂದರೇಶ್ ಗೌಡರವರ ಭತ್ತದ ಗದ್ದೆಯಲ್ಲಿ ಶಾಸಕ ಕುಮಾರಸ್ವಾಮಿ ಟಿಲ್ಲರ್ ಚಲಾಯಿಸಿ, ಭತ್ತದ ಗದ್ದೆ ಹದ ಮಾಡಿ ಬಳಿಕ ನಾಟಿ ಮಾಡಿದರು. ಈ ವೇಳೆ ಜನಪದ ಪದಗಳನ್ನು ಹಾಡಿದ ಶಾಸಕರು, ಕೂಲಿ ಕಾರ್ಮಿಕರ ಜೊತೆಯಲ್ಲಿ ಆಹಾರ ಸೇವಿಸಿ ಫುಲ್ ಎಂಜಾಯ್ ಮಾಡಿದರು.