ಚಿಕ್ಕಮಗಳೂರು : ಖಾತೆ ಹಂಚಿಕೆ ವಿಚಾರ ಕುರಿತಂತೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಅವರು ಓರ್ವ ಅನುಭವಿ ಹಾಗೂ ರೈತರಾಗಿದ್ದಾರೆ. ರೈತನಿಗೆ ದುಡಿಯುವ ಎತ್ತು ಯಾವುದು, ಕಳ್ಳ ಎತ್ತು ಯಾವುದು ಅಂತಾ ಗೊತ್ತಿದೆ. ದುಡಿಯುವ ಎತ್ತಿಗೆ ಚೆನ್ನಾಗಿ ಕೆಲಸ ಕೊಡುತ್ತಾರೆ. ಚೆನ್ನಾಗಿ ಮೇವು ಹಾಕಿದರೆ ಹೆಚ್ಚು ಕಾಲ ದುಡಿಯುತ್ತದೆ. ಕಳ್ಳ ಎತ್ತಿಗೆ ಏನು ಕೊಟ್ಟರೂ, ಹೆಗಲ ಮೇಲೆ ನೊಗ ಹಾಕಿದರೆ ಸೈಡ್ಗೆ ಎಳೆದುಕೊಂಡು ಹೋಗಿ ನಿಲ್ಲುತ್ತದೆ. ಯಡ್ಡಿಯೂರಪ್ಪ ಅವರು ದುಡಿಯುವ ಎತ್ತಿಗೆ ಹೆಚ್ಚು ಕೆಲಸ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.
ಕಣ್ಣುಕಟ್ಟು ಅಂತಾ ಯಾವುದು ಇಲ್ಲ, ಅದರ ಪ್ರಶ್ನೆಯೇ ಇಲ್ಲ. ನೂತನ ಸಚಿವರೊಂದಿಗೆ ಸಮಾಲೋಚನೆ ಮಾಡಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ನನಗೆ ಯಾವ ಖಾತೆ ಕೊಟ್ಟರೂ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.