ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅಂತರಘಟ್ಟಮ್ಮ ಜಾತ್ರೆ ನಡೆಯುತ್ತಿದೆ. ಇಲ್ಲಿಗೆ ಭಕ್ತರು ಎತ್ತಿನಗಾಡಿಯಲ್ಲಿ ಬರುತ್ತಾರೆ. ಜಾತ್ರೆಗೆ ಹೋಗುವ ವೇಳೆಯಲ್ಲಿ ಎರಡು ಎತ್ತಿನ ಗಾಡಿಗಳ ಪೈಪೋಟಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಎತ್ತಿನಗಾಡಿ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣ : ಗಂಡ ಮತ್ತು ಕುಟುಂಬಸ್ಥರ ಬಂಧನಕ್ಕೆ ಆಗ್ರಹ
ಅಜ್ಜಂಪುರ ತಾಲೂಕಿನ ಅಬ್ಬಿನ ಹೊಳಲು ಗ್ರಾಮದ ಜಕಣಾಚಾರಿ (49) ಎಂಬುವರು ಸಾವನ್ನಪ್ಪಿದ್ದಾರೆ. ಜೋರಾಗಿ ಎತ್ತಿನಗಾಡಿ ಓಡಿಸುವ ಸಂದರ್ಭದಲ್ಲಿ ರಾಸುಗಳಿಗೂ ಪೆಟ್ಟಾಗಿವೆ.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.