ETV Bharat / state

ಬಿಜೆಪಿ ವಿಧಾನ ಪರಿಷತ್​ ಸದಸ್ಯರಿಗೆ ಕಾಂಗ್ರೆಸ್​ ಶಾಸಕ ಪತ್ರ ಬರೆದಿದ್ಯಾಕೆ? ಇಷ್ಟಕ್ಕೂ ಅಂಥದ್ದೇನಿದೆ? - Letter to Pranesh, a member of the Method Council

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ಬರೆದಿರುವ ವಿಶೇಷ ಪತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Congress Legislator letter
ಬಿಜೆಪಿ ವಿಧಾನ ಪರಿಷತ್​ ಸದಸ್ಯರಿಗೆ ಕಾಂಗ್ರೆಸ್​ ಶಾಸಕ ಪತ್ರ
author img

By

Published : Dec 3, 2019, 11:19 PM IST

ಚಿಕ್ಕಮಗಳೂರು: ಬಿಜೆಪಿಗೆ ಕಾಂಗ್ರೆಸ್​ ಮುಖಂಡರನ್ನು ಕಂಡರೆ ಆಗುವುದಿಲ್ಲ, ಅದೇ ರೀತಿ ಕಾಂಗ್ರೆಸ್​​​ಗೆ ಬಿಜೆಪಿ ಮುಖಂಡರನ್ನು ಕಂಡರೆ ಆಗುವುದಿಲ್ಲ. ಇದು ನೂರಕ್ಕೆ ನೂರು ನಿಜ. ಆದರೆ, ಬಿಜೆಪಿಯ ವಿಧಾನ ಪರಿಷತ್​ ಸದಸ್ಯರೊಬ್ಬರಿಗೆ ಕಾಂಗ್ರೆಸ್​ ಶಾಸಕರೊಬ್ಬರು ಪತ್ರ ಬರೆದು ನಾವಿಬ್ಬರು ಆತ್ಮೀಯರು, ಕ್ಷೇತ್ರದ ಅಭಿವೃದ್ಧಿಗೆ ಒಂದಾಗೋಣ ಎಂದಿದ್ದಾರೆ.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ಬರೆದಿರುವ ವಿಶೇಷ ಪತ್ರಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಷ್ಟಕ್ಕೂ ಪತ್ರದಲ್ಲೇನಿದೆ?

ನಾವು ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆ. ಈ ಹಿಂದೆ ಇಬ್ಬರೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದೇವೆ. ರಾಜಕೀಯ ಪಕ್ಷಗಳು ಹೊರತಾಗಿಯೂ ನಾವಿಬ್ಬರು ಆತ್ಮೀಯರು. ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿರುವ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ಸಹಜ. ಆದರೆ ನನಗೆ ಇಂತಹ ಮೇಲಾಟಗಳಲ್ಲಿ ನಂಬಿಕೆ ಇಲ್ಲ.

Congress Legislator letter
ಕಾಂಗ್ರೆಸ್​ ಶಾಸಕ ಬರೆದ ಪತ್ರ

ಈ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಆಡಳಿತ ಪಕ್ಷದ ಪ್ರತಿನಿಧಿಯಾಗಿರುವ ನೀವು ವಿಶೇಷ ಹೆಚ್ಚಿನ ಅನುದಾನ ಒದಗಿಸಬೇಕು. ಕೊಪ್ಪ ತಾಲೂಕಿನಲ್ಲಿ ನನ್ನ ಸಮರ್ಪಣಾ ಕಚೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಸಮನ್ವಯ ಕಚೇರಿ, ಶೃಂಗೇರಿಯಲ್ಲಿ ಸದ್ಭಾವನ ಕಚೇರಿಗಳಿವೆ. ಈ ಎಲ್ಲವು ಸರ್ಕಾರಿ ಕಟ್ಟಡದಲ್ಲಿಯೇ ಇವೆ.

ಪ್ರತಿ ಸೋಮವಾರ ಕೊಪ್ಪ ಮತ್ತು ಶೃಂಗೇರಿ, ಶನಿವಾರ ಎನ್.ಆರ್.ಪುರ ಕಾರ್ಯಾಲಯಕ್ಕೆ ಭೇಟಿ ನೀಡುತ್ತೇನೆ. ನೀವು ಸಹ ನನ್ನ ಕಚೇರಿಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶೃಂಗೇರಿ ಶಾಸಕರು ತಮ್ಮ ಕಚೇರಿಯನ್ನೇ ಬಿಟ್ಟು ಕೊಡಲು ಮುಂದಾಗಿದ್ದಾರೆ. ಎಲ್ಲ ಶಾಸಕರು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತುಕೊಟ್ಟರೆ, ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಹೇಳುತ್ತಿದ್ದಾರೆ ಜನ.

Intro:Kn_Ckm_06_Mla_letter_mlc_av_7202347Body:ಚಿಕ್ಕಮಗಳೂರು :-

ಬಿಜೆಪಿಯವರಿಗೆ ಕಾಂಗ್ರೇಸ್ ಮುಖಂಡರು ಕಂಡರೇ ಆಗೋಲ್ಲ ಈ ಕಾಂಗ್ರೇಸ್ ಮುಖಂಡರಿಗೆ ಈ ಬಿಜೆಪಿಯವರಿಗೆ ಕಂಡರೇ ಆಗೋಲ್ಲ.ಆದರೇ ಶೃಂಗೇರಿಯ ಕಾಂಗ್ರೇಸ್ ಶಾಸಕ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಅವರಿಗೆ ಒಂದು ವಿಶೇಷ ಪತ್ರವನ್ನು ಬರೆದಿದ್ದು ಈ ಪತ್ರಕ್ಕೆ ಎಲ್ಲೇಡೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಧಾನಪರಿಷತ್ ಶಾಸಕರಾದ ಎಂ.ಕೆ.ಪ್ರಾಣೇಶ್‍ ಅವರು ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ನೋಡಲ್ ವಿಧಾನಸಭಾ ಕ್ಷೇತ್ರ ವಾಗಿ ಪಡೆದುಕೊಂಡಿದ್ದಾರೆಂದು ಕೆಲವು ಅಧಿಕಾರಿಗಳಿಂದಾ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರಿಗೆ ಮಾಹಿ ಹೋದ ಹಿನ್ನಲೆ ಪ್ರಾಣೇಶ್ ಅವರಿಗೆ ವಿಶೇಷ ಪತ್ರವನ್ನು ಶಾಸಕ ಟಿ ಡಿ ರಾಜೇಗೌಡ ಬರೆದಿದ್ದು ನಾವು ಪ್ರತಿ ನಿಧಿಸುವ ಪಕ್ಷಗಳು ಬೇರೆ ಬೇರೆಯಾಗಿದ್ದು . ನಾನು ಮತ್ತು ನೀವು ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಉತ್ತಮ ಸೇವೆಯನ್ನು ಈ ಹಿಂದೇ ಸಲ್ಲಿಸಿದ್ದೇವೆ. ರಾಜಕೀಯ ಪಕ್ಷಗಳು ಹೊರತಾಗಿಯೂ ನಾವಿಬ್ಬರು ಆತ್ಮೀಯರಾಗಿದ್ದೇವೆ. ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಇರುವ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ಸಹಜವಾಗಿರುತ್ತದೆ. ಆದರೆ ನನಗೆ ಇಂತಹ ರಾಜಕೀಯ ಮೇಲಾಟಗಳ ಮೇಲೆ ನಂಬಿಕೆ ಇರುವುದಿಲ್ಲ. ತಾವು ಈ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಪಕ್ಷದ ಪ್ರತಿನಿಧಿಯಾಗಿರುವ ನೀವು ಈ ಕ್ಷೇತ್ರಕ್ಕೆ ವಿಶೇಷ ಹೆಚ್ಚಿನ ಅನುದಾನವನ್ನು ಒದಗಿಸಬೇಕು ಮತ್ತು ಕೊಪ್ಪ ತಾಲೂಕಿನಲ್ಲಿರುವ ನನ್ನ ಸಮರ್ಪಣಾ ಕಚೇರಿ ಎನ್.ಆರ್.ಪುರ ತಾಲೂಕಿನಲ್ಲಿರುವ ಸಮನ್ವಯ ಕಚೇರಿ ಶೃಂಗೇರಿಯಲ್ಲಿರು ಸದ್ಭಾವನ ಕಚೇರಿಗಳು ಇದ್ದು ಈ ಎಲ್ಲಾ ಕಚೇರಿಗಳು ಸರ್ಕಾರಿ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಸೋಮವಾರ ಕೊಪ್ಪ ಮತ್ತು ಶೃಂಗೇರಿ, ಶನಿವಾರ ಎನ್.ಆರ್.ಪುರ ಕಾರ್ಯಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನೀವು ಸಹ ಈ ನನ್ನ ಕಛೇರಿಯನ್ನು ಉಪಯೋಗಿಸಿಕೊಳ್ಳ ಬಹುದಾಗಿದೆ ಎಂದೂ ತಮ್ಮ ಕಚೇರಿಯನ್ನೇ ಬಿಜೆಪಿ ವಿಧಾನ ಪರಿಷತ್ ಸದಸ್ಯರಿಗೆ ಕ್ಷೇತ್ರಗಳ ಅಭಿವೃದ್ದಿಯ ದೃಷ್ಟಿಯಿಂದಾ ಬಿಟ್ಟು ಕೊಡಲು ಮುಂದಾಗಿರುವ ಶೃಂಗೇರಿ ಶಾಸಕರ ನಡೆಗೆ ಎಲ್ಲೇಡೇ ಮೆಚ್ಚುಗೆ ವ್ಯಕ್ತವಾಗುತ್ತಿದೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.