ಚಿಕ್ಕಮಗಳೂರು: ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಗದ್ದೆಯಲ್ಲಿ ಭೂಕುಸಿತ ಉಂಟಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ಮನೋಜ್ ಎಂಬುವರ ಗದ್ದೆಯನ್ನು ನಾಟಿಗೆ ಹದಗೊಳಿಸಲಾಗಿತ್ತು. ನಿನ್ನೆ ಸಂಜೆ ದೊಡ್ಡ ಸದ್ದು ಕೇಳಿದೆ. ಗದ್ದೆಗೆ ತೆರಳಿ ನೋಡಿದಾಗ 60 ರಿಂದ 70 ಅಡಿ ಅಗಲದ ಕಂದಕ ಕಂಡುಬಂದಿದೆ.
ಸತತ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಡಿಕೆ, ಕಾಳು ಮೆಣಸು ಮತ್ತು ಕಾಫಿಗೆ ಕೊಳೆ ರೋಗದ ಭೀತಿ ಎದುರಾಗಿದೆ. ತೋಟದ ಕೆಲಸಗಳೂ ಸಂಪೂರ್ಣ ಸ್ಥಗಿತಗೊಂಡಿವೆ. ಬಯಲು ಭಾಗದಲ್ಲೂ ಮಳೆಯಾಗುತ್ತಿದ್ದು ಕೃಷಿ ಕಾರ್ಯಗಳಿಗೆ ತೊಡಕಾಗಿದೆ. ಕೆಲವೆಡೆ ಗದ್ದೆಗಳಲ್ಲಿ ನೀರು ನಿಂತಿದ್ದು ಬೆಳೆದು ನಿಂತ ಬೆಳೆಗಳು ಹಾನಿಗೀಡಾಗುವ ಭೀತಿ ರೈತರದ್ದು.
ಇದನ್ನೂ ಓದಿ: ಕೆಆರ್ಎಸ್ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ