ಚಿಕ್ಕಮಗಳೂರು: ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತ್ನಲ್ಲಿ ಇಟ್ಕೊಳ್ಳಿ. ವ್ಯಾಪಾರ ಮಾಡಲು ಬಿಡಬೇಡಿ. ನೀವು ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದೀರಿ. ಇದೇ ತರ ನಿಮ್ಮ ಕ್ರಿಯೆ ಮುಂದುವರೆಸಿದರೆ ಮತ್ತೆ ಜೈಲಿಗೆ ಹೋಗುತ್ತೀರಿ ಎಂದು ಸಿಎಂ ಯಡಿಯೂರಪ್ಪ ಮೇಲೆ ಮಾಜಿ ಸಿಎಂ ಕುಮಾಸ್ವಾಮಿ ಗುಡುಗಿದ್ದಾರೆ.
ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಮಾತನಾಡಿದ ಅವರು, ನಿಮ್ಮ ಮಕ್ಕಳನ್ನು ವ್ಯಾಪಾರ ಮಾಡಲು ಬಿಟ್ಟರೇ 2010 ರಲ್ಲಿ ಜೈಲಿಗೆ ಹೋಗಿಬಂದಂತೆ ಮತ್ತೆ ಅದೇ ಸ್ಥಾನಕ್ಕೆ ಹೋಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ವೀಟ್ ಮಾಡೋದು ಸುಲಭ, ಅದು ಮುಖ್ಯವಲ್ಲ, ನಿಮ್ಮ ನಡೆದುಕೊಳ್ಳುವ ಕ್ರಿಯೆ ಬಗ್ಗೆ ಗಮನ ಕೊಡಿ. ಸರ್ಕಾರ ಬೀಳಿಸೋಕೆ ನಿಮ್ಮ ಮಗ ಸಮಾಜಘಾತುಕ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಲೀಡ್ ತೋರ್ಸಿದ್ದಾರೆ. ನಾನು ಸಾವಿರ ಟ್ವೀಟ್ ಮಾಡಬಲ್ಲೆ. ನಾನು ಯಾವ ರೀತಿ ಬದುಕಬೇಕು ಅನ್ನೋದನ್ನ ನಿಮ್ಮಿಂದ ಕಲಿಯಬೇಕಿಲ್ಲ. ನಾವು ಮರ್ಯಾದೆಗೆ ಅಂಜಿ ಬದುಕಿರೋರು. ನಿಮ್ ತರಾ ಬದುಕಿಲ್ಲ ಎಂದು ಯಡಿಯೂರಪ್ಪ ಮೇಲೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ.