ಚಿಕ್ಕಮಗಳೂರು: ಗಾಂಜಾ ಬೆಳೆದಿದ್ದ ಹಾಗೂ ಅಕ್ರಮವಾಗಿ ಬಂದೂಕು ಹೊಂದಿದ್ದ ವ್ಯಕ್ತಿಯ ಮನೆ ಮೇಲೆ ಕುದುರೆಮುಖ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಸಂಪಾನೆ ಗ್ರಾಮದ ರವಿ(41) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 3 ಕೆ.ಜಿ 200 ಗ್ರಾಂ ಗಾಂಜಾ ಗಿಡ ಒಂದು SBML ಬಂದೂಕು, 25 ಸೀಸದ ಗುಂಡು, 25 ಗ್ರಾಮ ರಂಜಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.