ಚಿಕ್ಕಮಗಳೂರು: ಹುಲಿ ಯೋಜನೆ ಹಾಗೂ ಕಸ್ತೂರಿ ರಂಗನ್ ಯೋಜನೆ, ಪರಿಸರ ಸೂಕ್ಷ್ಮ ವಲಯ, ಬಫರ್ ಜೋನ್ ಯೋಜನೆಗಳ ವಿರುದ್ದ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಕಡಬಗೆರೆಯಲ್ಲಿ ಖ್ಯಾಂಡ್ಯ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ಸಾವಿರರು ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಈ ಭಾಗದ ಜನರು ಅನ್ನ ನೀಡುವ ಭೂಮಿ ತಾಯಿಯನ್ನು ನಂಬಿ ತಲ-ತಲಾಂತರದಿಂದ ಬದುಕು ನಡೆಸುತ್ತಿದ್ದು, ಸರ್ಕಾರ ಈಗ ಈ ಭಾಗದಲ್ಲಿ ಪರಿಸರ, ಅರಣ್ಯ ಕಾಯ್ಡೆ ಮತ್ತು ವಾಯುಗುಣ ಸೇರಿದಂತೆ ಮುಂತಾದ ಅಧಿಸೂಚನೆಗಳ ಮೂಲಕ ಮಲೆನಾಡಿನ ಜನರಿಗೆ ತೊಂದರೆ ನೀಡುತ್ತಿದೆ. ಈ ಯೋಜನೆ ಜಾರಿಯಾದರೇ ಈ ಭಾಗದ ಜನರಿಗೆ ಮಾರಕವಾಗಲಿದ್ದು, ನಮ್ಮ ಭೂಮಿ ನಮ್ಮ ನೆಲ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ಭಾಗದ ಸಾವಿರಾರು ಜನರು ಹಾಗೂ ರೈತರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಮಲೆನಾಡು ಪ್ರದೇಶ ಈಗಾಗಲೇ ಪ್ರಪಂಚದ ಅತ್ಯುತ್ತಮ ಬೆಳೆಗಳಿಗೆ ಹೆಸರುವಾಸಿಯಾಗಿದ್ದು, ಕಾಫೀ, ಅಡಿಕೆ, ಕಾಳು ಮೆಣಸು, ಭತ್ತ, ರಾಗಿ, ತೆಂಗು, ರಬ್ಬರ್, ಸೇರಿದಂತೆ ಗಿಡ ಮೂಲಿಕೆಗಳು ಬೆಳೆಯುವಂತಹ ಪ್ರದೇಶವಾಗಿದೆ. ಇದನ್ನು ನಂಬಿ ಲಕ್ಷಾಂತರ ಜನರು ಜೀವನ ನಡೆಸುತ್ತಿದ್ದಾರೆ. ಈ ಯೋಜನೆಗಳು ಜಾರಿಯಾದರೇ ಇಲ್ಲಿನ ಜನರನ್ನು ಬೀದಿಗೆ ಬಿದ್ದಂತೆ ಆಗುತ್ತದೆ. ಕೂಡಲೇ ಈ ಯೋಜನೆಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಒಂದು ವೇಳೆ ಈ ಅಧಿಸೂಚನೆ ಜಾರಿಯಾದರೇ ಈ ಭಾಗದಲ್ಲಿ ಉರುವಲನ್ನು ಬಳಸದಂತೆ ನಿಷೇಧ, ಮರ ಕಡಿತಲೆ ನಿಷೇಧ, ವಾಣಿಜ್ಯ ಉದ್ದೇಶದ ಹೋಟೆಲ್, ರೆಸಾರ್ಟ್ ಸ್ಥಾಪನೆಗೆ ನಿಷೇಧ, ರಾತ್ರಿ ವೇಳೆ ವಾಹನ ಸಂಚಾರದ ನಿಷೇಧ, ವಿದ್ಯುಚ್ಚಕ್ತಿ, ಮೊಬೈಲ್ ಟವರ್ಗಳ ನಿಲ್ಲಿಸುವಿಕೆ, ತೋಟಗಾರಿಕೆಗೆ, ವ್ಯವಸಾಯಕ್ಕೆ, ರಾಸಯನಿಕ ಗೊಬ್ಬರ ಹಾಗೂ ಔಷಧಿಗಳ ಬಳಕೆ ನಿಷೇಧ, ಹೊಸದಾಗಿ ಕೃಷಿ ಹಾಗೂ ವ್ಯವಸಾಯ ಮಾಡುವುದಕ್ಕೆ ನಿಷೇಧ ಆಗಲಿದೆ ಎಂದು ಆರೋಪಿಸಿ ಪ್ರತಿಭಟನೆಯಲ್ಲಿ ಆರೋಪಿಸಲಾಯಿತು.