ETV Bharat / state

ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಡೂರು ಬೀರೂರು ಬಂದ್​ - ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆ ಹಾಗೂ ಕಡೂರು ಸುತ್ತಮುತ್ತ ಸುದೀರ್ಘ ಕಾಲದಿಂದ ಸರಿಯಾಗಿ ಮಳೆಯಾಗದೇ ಬರದ ಛಾಯೆ ಎದುರಾಗಿದೆ. ಕಳೆದ ಎರಡು ದಶಕಗಳಿಂದಲೂ ಇಲ್ಲಿನ ಜನರು ಹಾಗೂ ಜಾನುವಾರುಗಳು ನೀರಿಗೂ ಹಾಹಾಕಾರ ಅನುಭವಿಸುತ್ತಿದ್ದಾರೆ. ಇದರಿಂದ ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜ‌ನೆಯನ್ನು ಅನುಷ್ಟಾನ ಮಾಡಬೇಕೆಂದು ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಕಡೂರು ಬೀರೂರು ಬಂದ್​
author img

By

Published : Jul 9, 2019, 11:08 PM IST

ಚಿಕ್ಕಮಗಳೂರು: ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜ‌ನೆಯನ್ನು ಶೀಘ್ರ ಅನುಷ್ಟಾನ ಮಾಡಬೇಕೆಂದು ಒತ್ತಾಯಿಸಿ ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಚಿಕ್ಕಮಗಳೂರು ಜಿಲ್ಲೆ ಹಾಗೂ ಕಡೂರು ಸುತ್ತ ಮುತ್ತ ಸುದೀರ್ಘ ಕಾಲದಿಂದ ಸರಿಯಾಗಿ ಮಳೆಯಾಗದೇ ಬರದ ಛಾಯೆ ಎದುರಾಗಿದೆ. ಕಳೆದ ಎರಡು ದಶಕಗಳಿಂದಲೂ ಇಲ್ಲಿನ ಜನರು ಹಾಗೂ ಜಾನುವಾರುಗಳು ಹನಿ ನೀರಿಗೂ ತತ್ವಾರ ಅನುಭವಿಸುತ್ತಿದ್ದಾರೆ. ಅಡಿಕೆ ತೆಂಗು ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ಈಗಾಗಲೇ ಒಣಗಿ ನೆಲಕಚ್ಚಿ ಹೋಗಿದೆ.

ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಡೂರು ಬೀರೂರು ಬಂದ್​

ಆದರೆ ಈವರೆಗೂ ಕಡೂರು ತಾಲೂಕಿಗೆ ಯಾವುದೇ ನೀರಾವರಿ ಯೋಜನೆ ಅನುಷ್ಟಾನವಾಗಿಲ್ಲ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿನ ಜನ ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜ‌ನೆಯನ್ನು ಅನುಷ್ಟಾನ ಮಾಡಬೇಕೆಂದು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಯಾವುದೇ ಪ್ರಯೋಜನೆಗಳಾಗಿಲ್ಲ.

ಈ ಭಾರಿಯ ಸಮ್ಮಿಶ್ರ ಸರ್ಕಾರ ಬಜೆಟ್​​​ನಲ್ಲಿ ಹೆಬ್ಬೆ ತಿರುವು ಯೋಜನೆಗೆ 100 ಕೋಟಿ ಮೀಸಲಿಡಲಾಗಿತ್ತು. ಆದರೆ ಈವೆರೆಗೂ ಕಾಮಗಾರಿಗೆ ಚಾಲನೆ ನೀಡಿಲ್ಲ. ಈ ಭಾರಿ ತಾಲೂಕಿಗೆ ನೀರಿನ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಡಿಕೆ ಬೆಳೆಗಾರರ ಸಂಘ ಸೇರಿದಂತೆ ಹಲವು ಸಂಘಟನೆಗಳ‌ ನೇತೃತ್ವದಲ್ಲಿ ಅವಳಿ ಪಟ್ಟಣಗಳಾದ ಕಡೂರು, ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗ್ರಾಹಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೆ, ಆಟೋ ಚಾಲಕರು, ಖಾಸಗಿ ಬಸ್ ಸಂಚಾರವನ್ನು ಸ್ವಯಂಕೃತವಾಗಿ ನಿಲ್ಲಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬರದ ನಾಡಿಗೆ ನೀರುಣಿಸಬೇಕಾಗಿದ್ದ ಯೋಜನೆಯೊಂದು ಅನುಷ್ಟಾನಗೊಳ್ಳಲು ಸಾಕಷ್ಟು ಕಾಲ ತೆಗೆದುಕೊಳ್ಳುತ್ತಿದೆ. ಆದರೆ ಇಲ್ಲಿನ ಜನರು ಮಾತ್ರ ಹನಿ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ಈ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ತಾಲೂಕಿನ ಜನರಿಗೆ ನೀರು ಕೊಟ್ಟು ಅವರ ಜೀವ ಉಳಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

Intro:Kn_Ckm_06_Protest for water_pkg_7202347Body:

ಚಿಕ್ಕಮಗಳೂರು :-

ಅದು ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ ತಾಲೂಕು. ಆ ತಾಲೂಕಿಗೆ ಕಳೆದ ಎರಡೂ ಮೂರು ದಶಕಗಳಿಂದ ಬರದ ಛಾಯೆ ಬಿಡದೇ ಆವರಿಸಿಕೊಂಡಿದೆ. ಈ ಕಡೂರು ತಾಲೂಕಿನಗೆ ಜೀವ ಜಲ ನೀಡಬೇಕಾಗಿದ್ದ ನೀರಾವರಿ ಯೋಜನೆಯೊಂದು ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಆ ನೀರಾವರಿ ಯೋಜನೆಯನ್ನು ಶೀಘ್ರ ಅನುಷ್ಠಾನ ಗೊಳಿಸಬೇಕು ಅಂತಾ ಆ ಜನ ಇವತ್ತು ಅಕ್ಷರಶಃ ಬೀದಿಗಿಳಿದಿದ್ದರು.ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ.....

ಹೌದು ಚಿಕ್ಕಮಗಳೂರು ಜಿಲ್ಲೆಯ ಸುದೀರ್ಘ ಕಾಲದಿಂದಾ ಸರಿಯಾಗಿ ಮಳೆಯಾಗದೇ ಬರದ ಛಾಯೆ ಎದುರಿಸುತ್ತಿರುವ ತಾಲೂಕು ಕಡೂರು. ಕಳೆದ ಎರಡು ದಶಕಗಳಿಂದಲೂ ಸಹ ಇಲ್ಲಿನ ಜನರು ಹಾಗೂ ಜಾನುವಾರುಗಳು ಹನಿ ನೀರಿಗೂ ಹಾಹಾಕಾರ ಅನುಭವಿಸುತ್ತಿದ್ದಾರೆ. ಅಡಿಕೆ ತೆಂಗು ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ಈಗಾಗಲೇ ಒಣಗಿ ನೆಲಕಚ್ಚಿ ಹೋಗಿದೆ. ಆದರೇ ಈ ವೆರೆಗೂ ಈ ತಾಲೂಕಿಕೆ ಹಲವು ನೀರಿನ ಸೆಲೆಗಳಿದ್ದರೂ ಯಾವುದೇ ನೀರಾವರಿ ಯೋಜನೆ ಮಾತ್ರ ಈ ವರೆಗೂ ಅನುಷ್ಟಾನವಾಗಿಲ್ಲ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿನ ಜನ ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜ‌ನೆಯನ್ನು ಅನುಷ್ಟಾನ ಮಾಡಬೇಕು ಅಂತಾ ಹೋರಾಟ ಮಾಡುತ್ತಲೇ ಈ ತಾಲೂಕಿನ ಜನರು ಬಂದಿದ್ದಾರೆ ಆದರೇ ಯಾವುದೇ ರೀತಿಯಾ ಪ್ರಯೋಜನ ಆಗಿಲ್ಲ.

ಇನ್ನು ಈ ಭಾರಿಯ ಸಮ್ಮಿಶ್ರ ಸರ್ಕಾರ ಬಜೆಟ್ ನಲ್ಲಿ ಈ ಹೆಬ್ಬೆ ತಿರುವು ಯೋಜನೆಗೆ 100 ಕೋಟಿ ಮೀಸಲಿಡಲಾಗಿತ್ತು. ಆದರೇ ಈ ವೆರೆಗೂ ಕಾಮಗಾರಿಗೆ ಚಾಲನೆ ನೀಡಿಲ್ಲ. ಆದರಲ್ಲೂ ಈ ಭಾರಿ ತಾಲೂಕಿನಲ್ಲಿ ಮಳೆಗಾಲದಲ್ಲಿಯೇ ತೀವ್ರ ಮಳೆ ಕೊರತೆ ಎದುರಾಗಿದೆ. ಈ ಹಿನ್ನಲೆ ಇಂದು ಅಡಿಕೆ ಬೆಳೆಗಾರರ ಸಂಘಸೇರಿದಂತೆ ಹಲವು ಸಂಘಟನೆಗಳ‌ ನೇತೃತ್ವದಲ್ಲಿ ಅವಳಿ ಪಟ್ಟಣಗಳಾದ ಕಡೂರು, ಬೀರೂರು ಪಟ್ಟಣಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗ್ರಾಹಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೇ, ಆಟೋ ಚಾಲಕರು, ಖಾಸಗಿ ಬಸ್ ಸಂಚಾರವನ್ನು ಸ್ವಯಂಕೃತವಾಗಿ ನಿಲ್ಲಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಬರದ ನಾಡಿಗೆ ನೀರುಣಿಸಬೇಕಾಗಿದ್ದ ಯೋಜನೆಯೊಂದು ಅನುಷ್ಟಾನಗೊಳ್ಳಲು ಸಾಕಷ್ಟು ಕಾಲ ತೆಗೆದುಕೊಳ್ಳುತ್ತಿದೆ. ಆದರೇ ಇಲ್ಲಿನ ಜನರು ಮಾತ್ರ ಹನಿ ಹನಿ ನೀರಿಗೂ ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.ಇನ್ನದಾರೂ ಸರ್ಕಾರ ಇತ್ತ ಗಮನ ಹರಿಸಿ ಈ ಯೋಜನೆಯನ್ನು ಕೂಡಲೇ ಪೂರ್ಣ ಗೊಳಿಸಿ ಈ ತಾಲೂಕಿನ ಜನರಿಗೆ ನೀರು ಕೊಟ್ಟು ಅವರ ಜೀವ ಉಳಿಸಬೇಕಿದೆ.....

byte:-1 ಶಂಕರ್.......... ಹೋರಾಟಗಾರ

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.