ETV Bharat / state

ಕಾಂಗ್ರೆಸ್ ಮುಖಂಡನ ಮನೆ ಮೇಲೆ ಪೊಲೀಸ್​ ದಾಳಿ: ನಕ್ಷತ್ರ ಆಮೆ, 2 ಗಂಧದ ತುಂಡು ಪತ್ತೆ - illegally Selling elephant ivory

ಅಕ್ರಮವಾಗಿ ಕಾರಿನಲ್ಲಿ ಆನೆ ದಂತವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ನಾಲ್ವರನ್ನು ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸರು ನಗರದ ಹೊರವಲಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

illegally Selling elephant ivory in chikkamagaluru
ಕಾಂಗ್ರೆಸ್ ಮುಖಂಡ ಶಬರೀಶ್ ಮನೆಯ ಮೇಲೆ ದಾಳಿ
author img

By

Published : Mar 1, 2020, 5:33 AM IST

ಚಿಕ್ಕಮಗಳೂರು : ಅಕ್ರಮವಾಗಿ ಕಾರಿನಲ್ಲಿ ಆನೆ ದಂತವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ನಾಲ್ವರನ್ನು ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸರು ನಗರದ ಹೊರವಲಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಶಬರೀಶ್ ಮನೆಯ ಮೇಲೆ ದಾಳಿ

ಶೃಂಗೇರಿ ತಾಲೂಕಿನ ಶಬರೀಶ್, ವಿಜಯ್, ಯೋಗೀಶ್, ಮಧುಸೂದನ್ ಎಂಬುವರು ಬಂಧಿತ ಆರೋಪಿಗಳು. ಆರೋಪಿಗಳು ಆನೆ ದಂತ ಹಾಗೂ ಐದು ಲಕ್ಷ ರೂ. ನಗದಿನೊಂದಿಗೆ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸುವಾಗ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಕಾರಿನೊಂದಿಗೆ ಮೂಗ್ತಿಹಳ್ಳಿಯಲ್ಲಿ ಬಳಿ ಬಂಧಿಸಿದ್ದರು. ನಿನ್ನೆ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಶೃಂಗೇರಿಯ ಕಾಂಗ್ರೆಸ್ ಮುಖಂಡ ಶಬರೀಶ್ ಮನೆಯ ಮೇಲೆ ದಾಳಿ ಮಾಡಿದ್ದು, ಈ ವೇಳೆ ಶೃಂಗೇರಿಯ ಶಬರೀಶ್ ಮನೆಯಲ್ಲಿ ಕಲ್ಲು ಆಮೆ, ನಕ್ಷತ್ರ ಆಮೆ, ಮತ್ತು ಎರಡು ಗಂಧದ ತುಂಡುಗಳು ಪತ್ತೆಯಾಗಿದ್ದು, 2 ಗನ್ ಸೇರಿದಂತೆ ಇತರೆ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ.

ದಾಳಿ ವೇಳೆ ಶಬರೀಶ್ ತಂದೆ ರಮೇಶ್ ಮತ್ತು ವಿಶ್ವನಾಥ ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.