ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕಡುಹಿನ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಳು ಕರಗುಂದದ ಸಮೀಪ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಸೆರೆ ಸಿಕ್ಕಿದೆ.
ಜಾರ್ಜ್ ಎಂಬುವರ ರಬ್ಬರ್ ತೋಟದಲ್ಲಿ ಕಾಡು ಮೊಲವನ್ನು ಹಿಡಿಯಲು ಬಂದಿದ್ದ ಕಾಳಿಂಗ ಸರ್ಪವನ್ನು ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸ್ಥಳೀಯರು ನೋಡಿದ್ದರು. ತಕ್ಷಣ ಎನ್ ಆರ್ ಪುರದ ಉರಗ ತಜ್ಞ ಹರೀಂದ್ರ ಅವರಿಗೆ ಫೋನ್ ಮಾಡಿ ಕರೆಯಿಸಿದ್ದು, ಹರೀಂದ್ರ ಅವರು ಸತತ ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಹರೀಂದ್ರ ಅವರು ಬಿಟ್ಟಿದ್ದಾರೆ.