ಚಿಕ್ಕಮಗಳೂರು : ನಮಗೆ ಎಕ್ಸಾಂ ಬೇಡ, ಹಿಜಾಬ್ ಬೇಕು ಎಂದು ಎಕ್ಸಾಂ ಬಿಟ್ಟು ಮಕ್ಕಳು ಹೊರಗೆ ನಿಂತಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಇಂದಾವರ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ 167 ಮಕ್ಕಳಲ್ಲಿ 153 ಮಕ್ಕಳು ಮುಸ್ಲಿಂ ಸಮುದಾಯದ ಮಕ್ಕಳಿದ್ದಾರೆ. ಇದರಲ್ಲಿ 25 ಮಕ್ಕಳು 10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದ ಮಕ್ಕಳು ಹಿಜಾಬ್ ತೆಗೆಯಲ್ಲ ಅಂತಾ ಹಠ ಹಿಡಿದು ಹೊರಗೆ ಹೋಗಿದ್ದಾರೆ.
ಈ ದಿನ ನಮಗೆ ಹಿಂದಿ ಎಕ್ಸಾಂ ನಡೆಯುತ್ತಿದೆ. ನಾವು ವೇಲ್ ತಲೆ ಮೇಲೆ ಧರಿಸಿದ್ದೇವೆ ಅನ್ನೋ ಕಾರಣಕ್ಕೆ ನಮ್ಮನ್ನ ಪರೀಕ್ಷೆಗೆ ಕೂರಿಸಿಲ್ಲ. ನಾವು ಈ ಹಿಜಾಬ್ ರಿಮೂವ್ ಮಾಡಿ ಪರೀಕ್ಷೆ ಬರೆಯಲ್ಲ. ವೇಲನ್ನ ಮೈಮೇಲೆ ಮಾತ್ರ ಹಾಕಬೇಕು ಅಂತಾ ಯಾರು ರೂಲ್ಸ್ ಕೊಟ್ಟಿದ್ದಾರೆ. ವೇಲನ್ನ ನಾವು ತಲೆ ಮೇಲು ಹಾಕಿಕೊಳ್ಳುತ್ತೇವೆ, ಎದೆ ಮೇಲೂ ಹಾಕಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.
ಇದನ್ನೂ ಓದಿ : ಹಿಜಾಬ್ ವಿವಾದ : ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭ