ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಧಾರಕಾರ ಮಳೆಯಿಂದ, ಮೂಡಿಗೆರೆ ತಾಲೂಕಿನಲ್ಲಿ ಮನೆಯೊಂದರ ನೆಲದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಆ ಬಿರುಕಿನಿಂದಲೇ ನೀರು ಉಕ್ಕಿ ಬರುತ್ತಿರುವ ಘಟನೆ ನಡೆದಿದೆ.
ನಗರದ ಬಾಲು ಶೆಟ್ಟಿ ಎಂಬುವವರ ಮನೆಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಆ ಬಿರುಕಿನಿಂದ ನೀರು ಉಕ್ಕಿ ಬರುತ್ತಿದೆ. ಮನೆಯೆಲ್ಲ ನೀರಿನಿಂದ ತುಂಬಿದ್ದು ಮನೆಯ ಸದಸ್ಯರು ನೀರಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಇಲ್ಲಿನ ಭೂಮಿ ಎಷ್ಟರ ಮಟ್ಟಿಗೆ ನೀರು ಕುಡಿದಿದೆ ಎಂದೂ ಊಹೆ ಮಾಡಬಹುದಾಗಿದ್ದು, ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ನೀರು ಮೇಲೆಕ್ಕೆ ಉಕ್ಕಿ ಬರುತ್ತಿದೆ. ಇದೇ ರೀತಿ ಎಲ್ಲ ಭಾಗದಲ್ಲಿ ಸಮಸ್ಯೆ ಉದ್ಬವವಾದರೇ ಮಲೆನಾಡಿನ ಗತಿಯೇನು ಎಂದು ಇಲ್ಲಿನ ಜನ ಭಯಭೀತರಾಗಿದ್ದಾರೆ.
ಇನ್ನೂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ, ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತದ ವರದಿಗಳು ದಾಖಲೆಯಾಗುತ್ತಲೇ ಇವೆ. ಕಳಸ ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಗುಡ್ಡ ಕುಸಿದು ಭಾರೀ ಮಣ್ಣು ರಸ್ತೆಗೆ ಜಾರಿದೆ.