ಚಿಕ್ಕಮಗಳೂರು: ಮಹಾಮಳೆಯಿಂದ ಉಂಟಾಗಿದ್ದ ಗುಡ್ಡ ಹಾಗೂ ಭೂ ಕುಸಿತದಿಂದ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಇನ್ನೂ ಕೂಡ ಮಲೆನಾಡು ಭಾಗದಲ್ಲಿ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿದ್ದ ಒಟ್ಟು 12 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.
ಮಳೆಯಿಂದ ಹೊರ ಬರಲಾಗದೇ 12 ಜನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿಯೇ ಕಳೆದ ಒಂದು ವಾರದಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಗ್ರಾಮದ ಸುತ್ತಲೂ ಗುಡ್ಡ ಹಾಗೂ ಭೂ ಕುಸಿತ ಸಂಭವಿಸಿದ ಹಿನ್ನೆಲೆ ಮನೆಯಲ್ಲಿಯೇ ಉಳಿದಿದ್ದರು. ಇವರನ್ನು ಗುರುತಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.
ದುರ್ಗಮ ಹಾದಿಯಲ್ಲಿ ಹಿರಿಯ ಜೀವಗಳು ಸೇರಿದಂತೆ ಕೆಲವು ಸಾಕು ಪ್ರಾಣಿಗಳನ್ನು ಸಹ ಅಗ್ನಿಶಾಮಕ ದಳದ ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದಿದ್ದಾರೆ.