ಚಿಕ್ಕಮಗಳೂರು: ನಗರದಲ್ಲಿ ಇಂದು ಕೂಡಾ ರೇವತಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯಿತು.
ಚಿಕ್ಕಮಗಳೂರು ನಗರ ಸೇರಿದಂತೆ ಬಾಳೆಹೊನ್ನೂರು, ಕಳಸ, ಶೃಂಗೇರಿ, ತರೀಕೆರೆ, ಕಡೂರು, ಕೆಮ್ಮಂಗುಂಡಿ, ಕೊಪ್ಪ ಸುತ್ತಮುತ್ತಲು ಮಳೆಯ ಆರ್ಭಟ ಹೆಚ್ಚಾಗಿತ್ತು. ಬೇಸಿಗೆ ಬಿಸಿಲಿಗೆ ಬೆಂಡಾಗಿದ್ದ ಮರಳು ಮತ್ತೆ ಚಿಗುರೊಡೆಯುತ್ತಿವೆ.
ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ನಿಟ್ಟುಸಿರು ಬಿಡುವಂತಾಗಿದೆ. ಮಲೆನಾಡ ಭಾಗದಲ್ಲೂ ಮೋಡ ಕವಿದ ವಾತಾವರಣವಿದೆ.