ಚಿಕ್ಕಮಗಳೂರು: ಇವತ್ತು ಎಲ್ಲಾದರೂ ಬಾಂಬ್ ಹಾಕಿಸಿದ್ರಾ, ಮಂಗಳೂರು ಪೊಲೀಸ್ ಕಮಿಷನರ್ ಹರ್ಷ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಶೃಂಗೇರಿಯ ಶಾರದಾ ಪೀಠದಲ್ಲಿ ಕಳೆದ 5 ದಿನಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕುಟುಂಬ ಹಮ್ಮಿಕೊಂಡಿದ್ದ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಮಂಗಳೂರಿನಲ್ಲಿ ಪತ್ತೆಯಾದ ಬಾಂಬ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ಆರೋಪಿಸಿದ್ರು.
ನನ್ನ ಅಧಿಕಾರಾವಧಿಯಲ್ಲಿ ಈ ರೀತಿಯ ಪ್ರಕರಣಗಳು ನಡೆದಿರಲಿಲ್ಲ. 14 ತಿಂಗಳ ಅಧಿಕಾರಾವಧಿ ವೇಳೆ ಈ ರೀತಿಯ ಬೆಳವಣಿಗೆಗಳೂ ಕಂಡುಬಂದಿರಲಿಲ್ಲ. ಅದು ಕೂಡಾ ಮಂಗಳೂರಿನಲ್ಲೇ ಏತಕ್ಕೋಸ್ಕರ ಇಂತಹ ಘಟನೆಗಳು ನಡೆಯುತ್ತಿವೆ ಅನ್ನೋ ಅನುಮಾನ ಮೂಡುತ್ತಿದೆ ಎಂದು ಹೆಚ್ಡಿಕೆ ಹೇಳಿದ್ರು. ಬಳಿಕ ಅವರು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ರು.