ETV Bharat / state

ಕಳಪೆ ಕಾಮಗಾರಿಯಿಂದ ಕೆರೆ ಏರಿ ರಸ್ತೆ ಕುಸಿತ: ಗ್ರಾಮಸ್ಥರಲ್ಲಿ ಆತಂಕ - ರಸ್ತೆ ಕುಸಿತ

ಕಳೆದ ಎರಡು ಮೂರು ವರ್ಷಗಳ ಹಿಂದಷ್ಟೇ ದುರಸ್ತಿಗೊಂಡಿದ್ದ ಚಿಕ್ಕಮಗಳೂರು ತಾಲೂಕಿನ ಹಂಪಾಪುರದ ಕರ್ಕಿ ಕೆರೆ ರಸ್ತೆ ಕುಸಿದಿದ್ದು, ಜನರು ಓಡಾಡಲು ಭಯ ಪಡುವಂತಾಗಿದೆ.

hampapur bund  road collapse news
ರಸ್ತೆ ಕುಸಿತ
author img

By

Published : Oct 17, 2020, 4:17 PM IST

ಚಿಕ್ಕಮಗಳೂರು : ತಾಲೂಕಿನ ಹಂಪಾಪುರದ ಕರ್ಕಿ ಕೆರೆ ಏರಿ ಕುಸಿತ ಉಂಟಾಗಿದ್ದು, ಹಂಪಾಪುರ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ ಎರಡು ಮೂರು ವರ್ಷದ ಹಿಂದಷ್ಟೇ, ಈ ಕೆರೆ ಏರಿಯ ದುರಸ್ತಿ ಕಾರ್ಯ ಮಾಡಲಾಗಿತ್ತು. ಆದರೆ ಈಗ ದಿಢೀರನೆ ಏರಿ ಕುಸಿತ ಉಂಟಾಗುತ್ತಿರುವ ಹಿನ್ನೆಲೆ ಜನರು ಗಾಬರಿಗೊಂಡಿದ್ದಾರೆ. ಏರಿಯ ಮೇಲೆ ಸಂಚಾರ ಮಾಡುವುದಕ್ಕೂ ಭಯಪಡುತ್ತಿದ್ದಾರೆ.

ಈ ಏರಿ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಈ ಕೆರೆಯ ರಸ್ತೆಯ ಏರಿಯನ್ನು ಸರಿಪಡಿಸಿ ಕಳಪೆ ಕಾಮಗಾರಿ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.