ETV Bharat / state

ಚುನಾವಣೆ ಹೊತ್ತಲ್ಲಿ ಜನರಿಗೆ ಆಮಿಷ.. ಕಾಫಿ ನಾಡಲ್ಲಿ 9 ಕೆಜಿಗೂ ಆಧಿಕ ಚಿನ್ನ, ಸೀರೆಗಳು ವಶಕ್ಕೆ - ಸೂರತ್ ಸ್ಯಾರಿ ಫ್ಯಾಕ್ಟರಿ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 9 ಕೆಜಿಗೂ ಅಧಿಕ ಬಂಗಾರದ ಸರ ಹಾಗೂ ಗೋಲ್ಡ್​ ಬಿಸ್ಕೆಟ್​ಗಳನ್ನು ಪೊಲೀಸರು ಚಿಕ್ಕಮಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಕೋಟ್ಯಾಂತರ ರೂ ಮೌಲ್ಯದ ಚಿನ್ನ ಹಾಗೂ ಸೀರೆ ವಶ
ಕೋಟ್ಯಾಂತರ ರೂ ಮೌಲ್ಯದ ಚಿನ್ನ ಹಾಗೂ ಸೀರೆ ವಶ
author img

By

Published : Mar 23, 2023, 8:02 PM IST

ಜಿಲ್ಲಾಧಿಕಾರಿ ಕೆ ಎನ್ ರಮೇಶ್

ಚಿಕ್ಕಮಗಳೂರು: ಚುನಾವಣಾ ಆಯೋಗದ ನಿದೇರ್ಶನದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣಾ ದಳ ಹೈಅಲರ್ಟ್ ಆಗಿದೆ. ಈಗಾಗಲೇ ದಾಖಲೆ ಇಲ್ಲದ ಕೋಟ್ಯಂತರ ಮೌಲ್ಯದ ಚಿನ್ನ, ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದೆ.

ಗೋಲ್ಡ್​ ಬಿಸ್ಕೆಟ್​ಗಳು ಪೊಲೀಸರ ವಶ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೆಡೆ ಚಿನ್ನ ಸಿಕ್ಕರೆ ಮತ್ತೊಂದೆಡೆ ಸೀರೆಗಳನ್ನು ವಶಕ್ಕೆ ಪಡೆದಿರುವ ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 9 ಕೆಜಿಗೂ ಅಧಿಕ ಬಂಗಾರದ ಸರ ಹಾಗೂ ಗೋಲ್ಡ್ ಬಿಸ್ಕೆಟ್‍ಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದ್ದು, ಚುನಾವಣೆ ನಿಮಿತ್ತ ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲೂ ಪೊಲೀಸ್ ಇಲಾಖೆ ಚೆಕ್‍ ಪೋಸ್ಟ್​ಗಳನ್ನು ನಿರ್ಮಿಸಿದೆ.

ಬಂಗಾರದ ಆಭರಣ ವಶಕ್ಕೆ ಪಡೆದಿರುವುದು
ಬಂಗಾರದ ಆಭರಣ ವಶಕ್ಕೆ ಪಡೆದಿರುವುದು

ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ : ತರೀಕೆರೆ ತಾಲೂಕಿನ ಎಂಸಿಹಳ್ಳಿ ಚೆಕ್‍ಪೋಸ್ಟ್ ಬಳಿ ಇರುವ ಚೆಕ್​ಪೋಸ್ಟ್ ಬಳಿ ಪಿಕ್‍ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ 30 ಲಕ್ಷ ಮೌಲ್ಯದ ಚಿನ್ನ ಹಾಗೂ ಚಿನ್ನದ ಬಿಸ್ಕೆಟ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪಿಕ್‍ಅಪ್ ವಾಹನ, ಗಾಡಿಯಲ್ಲಿದ್ದ ಇಬ್ಬರು ಹಾಗೂ ಚಿನ್ನವನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಈ ಚಿನ್ನವನ್ನ ಚುನಾವಣೆ ನಿಮಿತ್ತ ಖರ್ಚಿಗಾಗಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಅಂದಾಜಿಸಲಾಗಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸುಮಾರು 666 ಕ್ಕೂ ಹೆಚ್ಚು ಸೀರೆ ವಶ : ಚುನಾವಣೆಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರಿನ ಖಾಸಗಿ ಗೋದಾಮಿನಲ್ಲಿ ಸಾವಿರಾರು ಸೀರೆಗಳನ್ನು ಚುನಾವಣೆ ವೇಳೆ ಹಂಚಲೆಂದು ಸಂಗ್ರಹಿಸಿಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಚುನಾವಣಾ ವಿಚಕ್ಷಣಾ ದಳ ಸಿಬ್ಬಂದಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 666 ಕ್ಕೂ ಹೆಚ್ಚು ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿನ್ನದ ಗಟ್ಟಿ ವಶಕ್ಕೆ ಪಡೆದಿರುವುದು
ಚಿನ್ನದ ಗಟ್ಟಿ ವಶಕ್ಕೆ ಪಡೆದಿರುವುದು

ಇದನ್ನೂ ಓದಿ : ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ: ಡಿಕೆಶಿ ಹೇಳಿದ್ದೇನು?

ಪೊಲೀಸರ ಸಂಪರ್ಕಕ್ಕೆ ಸಿಗದೆ ಆರೋಪಿ ಪರಾರಿ: ಅಧಿಕಾರಿಗಳು ಸ್ಥಳಕ್ಕೆ ಬರುವ ವೇಳೆ ಸಾವಿರಾರು ಸೀರೆಗಳು ನಾಪತ್ತೆಯಾಗಿದ್ದವು ಎಂದು ಹೇಳಲಾಗುತ್ತಿದ್ದು, ಸೀರೆಗಳನ್ನು ಸೂರತ್ ನಿಂದ ತರಿಸಲಾಗಿತ್ತೆಂಬ ಮಾಹಿತಿ ದೊರೆತಿದೆ. ಸೀರೆ ಸಂಗ್ರಹಿಸಿಟ್ಟಿದ್ದ ಚಂದನ್ ಕುಮಾರ್ ಜೈನ್ ಎಂಬುವವನ ಹೆಸರಲ್ಲಿ ಈ ಸೀರೆಗಳು ಬಂದಿವೆ. ಆರೋಪಿ ಪೊಲೀಸರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ.

ಈ ಕುರಿತು ಸೂರತ್ ಸ್ಯಾರಿ ಫ್ಯಾಕ್ಟರಿಗೆ ಸಂಪರ್ಕಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದ್ದು, ಈ ಕುರಿತು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಸದಾ ನಗರದಲ್ಲಿ ಗಸ್ತು ತಿರುಗಲು ಪ್ರಾರಂಭ ಮಾಡಿದೆ.

ಇದನ್ನೂ ಓದಿ : ದಾಖಲೆ ಇಲ್ಲದ ₹ 9 ಲಕ್ಷ ಹಣ ಚೆಕ್​ಪೋಸ್ಟ್​ನಲ್ಲಿ ಸೀಜ್ : ಎಸ್​ಪಿ ಎನ್ ಯತೀಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.