ETV Bharat / state

ಹುಲಿ ಚರ್ಮದ ಮೇಲೆ ಕುಳಿತ ಫೋಟೊ ವೈರಲ್: ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಸ್ಪಷ್ಟನೆ ಹೀಗಿದೆ.. - ವನ್ಯಪ್ರಾಣಿ ವಿಭಾಗದ ಉಪಅರಣ್ಯಾಧಿಕಾರಿಗಳಿಂದ ಅನುಮತಿ

ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತ ಫೋಟೊ ವೈರಲ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಶ್ರಮದಲ್ಲಿ ಶೋಧ ಕಾರ್ಯ ನಡೆಸಿದ್ದು, ಗುರೂಜಿ ಕೂಡಾ ಸ್ಪಷ್ಟನೆ ನೀಡಿದ್ದಾರೆ.

Guruji  who explained
ಹುಲಿ ಚರ್ಮದ ಮೇಲೆ ಕುಳಿತಿರುವ ಬಗ್ಗೆ ಸ್ಪಷ್ಟನೆ ನೀಡಿದ ಗೌರಿ ಗದ್ದೆಯ ಆಶ್ರಮದ ಗುರೂಜಿ
author img

By ETV Bharat Karnataka Team

Published : Oct 25, 2023, 8:11 PM IST

Updated : Oct 25, 2023, 9:23 PM IST

ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಮಾಧ್ಯಮದವರ ಜೊತೆ ಮಾತನಾಡಿದರು.

ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಚರ್ಚೆಗೀಡು ಮಾಡಿದೆ. ಎರಡು ವರ್ಷದ ಹಿಂದಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಕೊರಳಲ್ಲಿ ಹುಲಿ ಉಗುರು ಧರಿಸಿ ವಿವಾದಕ್ಕೀಡಾದ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ರಾಜ್ಯಾದ್ಯಂತ ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮದ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಎಲ್ಲೆಡೆ ಮತ್ತೆ ವೈರಲ್ ಆಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಶ್ರಮಕ್ಕೆ ಆಗಮಿಸಿ ತಪಾಸಣೆ ಮಾಡಿದ್ದು, ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ.

ಭಕ್ತರಾದ ಶಿವಮೊಗ್ಗ ಮೂಲದ ಡಿ.ಆರ್‌.ಅಮರೇಂದ್ರ ಕಿರೀಟಿ ಎಂಬವರು ಆಶ್ರಮಕ್ಕೆ ಎರಡು ವರ್ಷದ ಹಿಂದೆ ಹುಲಿ ಚರ್ಮವನ್ನು ಕೊಡುಗೆಯಾಗಿ ನೀಡಿದ್ದರು. ಇದು 80 ವರ್ಷ ಹಳೆಯದ್ದಾಗಿದೆ. ಹುಲಿ ಚರ್ಮ ನೀಡುವ ಸಂದರ್ಭದಲ್ಲಿ ಶಿವಮೊಗ್ಗದ ವನ್ಯಪ್ರಾಣಿ ವಿಭಾಗದ ಉಪ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದಿದ್ದರು. (The Assistant wild life warden Declaration of Trophy Form 11 Rule 34 god Possession Certificate) ಕಲಂ 43(1) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ, Assistant wild life warden Form 11 ಅನ್ನು ಲಗತ್ತಿಸಿ ಆಶ್ರಮಕ್ಕೆ ಹುಲಿ ಚರ್ಮವನ್ನು ಹಸ್ತಾಂತರ ಮಾಡಲಾಗಿತು. ಹುಲಿ ಚರ್ಮ ಇಟ್ಟುಕೊಳ್ಳುವುದು ತಪ್ಪು ಎಂದು ಅರಿತು ಮತ್ತೆ ಇಲಾಖೆಗೆ ಗೌರಿಗದ್ದೆ ಆಶ್ರಮ ಹಿಂದಿರುಗಿಸಿತ್ತು.

20-05-2023ರಲ್ಲಿ ಶಿವಮೊಗ್ಗದ ವನ್ಯಜೀವಿ ವಲಯ ಅರಣ್ಯಾಧಿಕಾರಿಗೆ ಹುಲಿ ಚರ್ಮ ಹಸ್ತಾಂತರ ಮಾಡಿದ್ದು, ಈಗಾಗಲೇ ಐದು ತಿಂಗಳು ಕಳೆದಿದೆ. ಈ ಎಲ್ಲಾ ದಾಖಲೆ ಪತ್ರಗಳು ಆಶ್ರಮದ ಬಳಿ ಇದ್ದು, ಬಹಿರಂಗಪಡಿಸಲಾಗಿದೆ.

ಅವಧೂತ ವಿನಯ್ ಗುರೂಜಿ ಸ್ಪಷ್ಟನೆ: ಒಂದೂವರೆ ವರ್ಷದ ಹಿಂದೆ ಶಿವಮೊಗ್ಗದ ಅಮರೇಂದ್ರ ಕಿರೀಟಿ ಎಂಬವರು ಇದನ್ನು ಆಶ್ರಮಕ್ಕೆ ಕೊಡುಗೆಯಾಗಿ ನೀಡಿದ್ದರು. ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ಅನುಮತಿ ಪಡೆದೇ ನೀಡಿದ್ದರು. ನಾನು ಜನಿಸುವುದಕ್ಕಿಂತಲೂ ಮುಂಚಿನಿಂದಲೂ ಈ ಹುಲಿ ಚರ್ಮ ಇದೆ. ಕಳೆದ ವರ್ಷವೇ ಈ ಬಗ್ಗೆ ಆಶ್ರಮದ ಟ್ರಸ್ಟಿಗಳು ಮೀಟಿಂಗ್ ಮಾಡಿದ ಸಂದರ್ಭದಲ್ಲಿ, ಯಾವುದೂ ಮಠಕ್ಕೆ ನೀಡುವುದು ಬೇಡ, ಸರ್ಕಾರಕ್ಕೆ ಹಸ್ತಾಂತರ ಮಾಡೋಣ ಎಂದು ಸಲಹೆ ನೀಡಿದ್ದೆ. ಈಗಾಗಲೇ ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಅದರ ವಿಡಿಯೋ ಕೂಡ ಇದೆ. ಈ ಎಲ್ಲಾ ದಾಖಲೆಗಳನ್ನು ನೋಡಿ ಪ್ರತಿಯೊಬ್ಬರೂ ಚರ್ಚೆ ಮಾಡಬಹುದು ಎಂದು ಅವಧೂತ ವಿನಯ್ ಗುರೂಜಿ ತಿಳಿಸಿದರು.

ಹುಲಿ ಚರ್ಮ ಎಲ್ಲಿಂದ ಬಂತು, ಈಗ ಎಲ್ಲಿದೆ ಎಂಬ ಕುರಿತ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಪ್ರಾಣಿಪ್ರಿಯ ಸಂಘಟನೆಯವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಅದಕ್ಕೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದು ವಿನಯ್ ಗುರೂಜಿ ಪ್ರತಿಕ್ರಿಯಿಸಿದ್ದಾರೆ.

ಆಶ್ರಮ ತಪಾಸಣೆ: ಆಶ್ರಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಡಿಎಫ್ಒ ನೇತೃತ್ವದಲ್ಲಿ ಮತ್ತೊಮ್ಮೆ ತಪಾಸಣೆ ಮಾಡಲಾಗಿದೆ. ಈ ವೇಳೆ ಅರಣ್ಯ ಅಧಿಕಾರಿಗಳಿಗೆ ದಾಖಲೆ ಪತ್ರಗಳನ್ನು ನೀಡಲಾಗಿದೆ. ಇಡೀ ಆಶ್ರಮ ಪರಿಶೀಲಿಸಿದ ಬಳಿಕ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪಡೆದುಕೊಂಡು ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂಓದಿ: ಹುಲಿ‌ ಉಗುರು ಪ್ರಕರಣ.. ಎಷ್ಟೇ ಪ್ರಭಾವಿಗಳಿದ್ದರೂ ಕಾನೂನು ಪ್ರಕಾರವೇ ಕ್ರಮ: ಸಚಿವ ಈಶ್ವರ ಖಂಡ್ರೆ

Last Updated : Oct 25, 2023, 9:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.