ETV Bharat / state

ಮೂರು ಮನೆಯಲ್ಲಿ ಸಿಲಿಂಡರ್ ಸ್ಫೋಟ, ನಾಲ್ಕು ಮನೆಗಳು ಸುಟ್ಟು ಭಸ್ಮ - ಸಿಲಿಂಡರ್ ಸ್ಫೋಟದಿಂದ ಹಾನಿ

ಸಿಲಿಂಡರ್​ಗಳ ಸ್ಫೋಟದಿಂದ ನಾಲ್ಕು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.

Four houses shatter in a cylinder explosion
ಮೂರು ಮನೆಯಲ್ಲಿ ಸಿಲಿಂಡರ್ ಸ್ಫೋಟ
author img

By

Published : Mar 5, 2021, 11:29 PM IST

ಚಿಕ್ಕಮಗಳೂರು: ಮೂರು ಮನೆಯಲ್ಲಿದ್ದ ಸಿಲಿಂಡರ್​​ಗಳು ಸ್ಫೋಟಗೊಂಡು ನಾಲ್ಕು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 4 ಶೀಟ್​​​​​​​​​ ಮನೆಗಳು ಸುಟ್ಟು ಕರಕಲಾಗಿವೆ.

ಮೂರು ಮನೆಯಲ್ಲಿ ಸ್ಫೋಟಗೊಂಡ ಸಿಲಿಂಡರ್

ನರಸಿಂಹಪ್ಪ, ವಾಸು, ಭೀಮಣ್ಣ, ಬಸವರಾಜ್ ಎಂಬುವರಿಗೆ ಸೇರಿದ ಮನೆಗಳು ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗಿದೆ. ಮೊದಲು ನರಸಿಂಹಪ್ಪ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಬಳಿಕ ಪಕ್ಕದ 2 ಮನೆಗಳ ಸಿಲಿಂಡರ್​ಗಳು ಸಹ ಸ್ಫೋಟಗೊಂಡಿವೆ. ಮೂರು ಸಿಲಿಂಡರ್​ಗಳ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ.

ಅದೃಷ್ಟವಶಾತ್ ಮನೆಯಿಂದ ಎಲ್ಲರೂ ಹೊರಓಡಿಬಂದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಶೇಖರಪ್ಪ ಎಂಬುವರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಹೆಲಿಪ್ಯಾಡ್ ಕಾಮಗಾರಿ ಹೆಸರಲ್ಲಿ ಸರ್ಕಾರಕ್ಕೆ ಬಿತ್ತಾ ಟೋಪಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.