ETV Bharat / state

ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ: ಸಿ ಟಿ ರವಿ - Chief Minister Siddaramaiah

ಬಿ ವೈ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ಮಾಜಿ ಸಚಿವ ಸಿ ಟಿ ರವಿ
ಮಾಜಿ ಸಚಿವ ಸಿ ಟಿ ರವಿ
author img

By ETV Bharat Karnataka Team

Published : Nov 13, 2023, 7:19 PM IST

ಮಾಜಿ ಸಚಿವ ಸಿ ಟಿ ರವಿ

ಚಿಕ್ಕಮಗಳೂರು : ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಅವರು ನನ್ನ ಜೊತೆ 2 ಬಾರಿ ಫೋನ್​ನಲ್ಲಿ ಮಾತನಾಡಿದ್ದಾರೆ. 15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡ್ತಿದ್ದಾರೆ. 15 ರ ರಾತ್ರಿವರೆಗೂ ಮಧ್ಯ ಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. 15ಕ್ಕೆ ನಾನು ಇರಲ್ಲ ಅಂತ ಹೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ನಂತರ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಸಿ ಟಿ ರವಿ ಮೌನ ವಹಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನು ಇದ್ದೀನಾ? ರಾಜ್ಯಾದ್ಯಂತ ಪ್ರವಾಸ ಮಾಡುವೆ, ರೇಣುಕಾಚಾರ್ಯ ಹೇಳಿಕೆಗೆ ನಾನೇನು ಹೇಳಲಿ. ನಾನ್ ಏನ್ ಹೇಳೋಕೆ ಆಗುತ್ತೆ. ಅದು ಅವರ ಭಾವನೆ, ಅವರು ಹೇಳಿದ್ದಾರೆ. ರಾಜ್ಯ ಸುತ್ತಬಹುದು, ಸುತ್ತುವ ಸಾಮರ್ಥ್ಯ ಇದೆ. ಸುತ್ತಲಿ ಎಂದು ಹೇಳಿದರು.

ನನಗೆ ರಾಜಕೀಯ ಬೇಡ ಅಂದ್ರೆ ಬಿಜೆಪಿ ಬಿಟ್ಟು ಇರ್ತೀನಿ. ಆದ್ರೆ, ಬೇರೆ ಪಾರ್ಟಿಗೆ ಹೋಗಿ ರಾಜಕೀಯ ಮಾಡಲ್ಲ. ನಾನು ಬೇರೆ ಪಕ್ಷಕ್ಕೆ ಮತ ಕೇಳಲು ಆಗಲ್ಲ. ಬಿಜೆಪಿಗೆ ಮತ ಕೇಳಬೇಕು. ಯಾವುದೇ ಜವಾಬ್ದಾರಿ ಇಲ್ಲ ಅಂದ್ರು ಶಕ್ತಿ ಮೀರಿ ಬಿಜೆಪಿ ಮತ ಕೇಳೋದು. ನಾನು ಬೇರೆ ಪಕ್ಷಕ್ಕೆ ಮತ ಕೇಳಲು ಆಗಲ್ಲ. ನನಗೆ ಕೊಟ್ರೆ ಮಾತ್ರ ಬಿಜೆಪಿ, ಕೊಡದಿದ್ರೆ ಬಿಜೆಪಿ ಅಲ್ಲ ಅಂತ ಹೇಳಲು ಆಗುತ್ತಾ. ಬಿಜೆಪಿ ಸೇರಿದಾಗಿನಿಂದ ವೋಟ್​​ ಕೇಳಿರೋದು, ಹಾಕಿರೋದು ಎರಡೂ ಬಿಜೆಪಿಗೆ ಎಂದು ಹೇಳಿದರು.

ನಾವು ಪಕ್ಷದ ಲಕ್ಷ್ಮಣ ರೇಖೆಯನ್ನ ಯಾವತ್ತೂ ದಾಟಿದ್ದೇವೆ: 20 ವರ್ಷ ಶಾಸಕ, 35 ವರ್ಷ ಕಾರ್ಯಕರ್ತ, ಪಕ್ಷದ ಲಕ್ಷ್ಮಣ ರೇಖೆ ಯಾವತ್ತು ದಾಟಿದ್ದೀವಿ. ಜಗಳ ಆಡಿದ್ದರೂ ನಮ್ಮ ಮನೆ ಒಳಗೆ ಜಗಳ ಆಡಿದ್ದೇನೆ. ಹೊಸ್ತಿಲು ದಾಟಿ ಬೇರೆಯವರ ಮನೆಗೆ ಹೋಗಿ ಕೂತು ನಮ್ಮ ಮನೆ ಸಮಸ್ಯೆ ಬಗೆಹರಿಸಿ ಅಂತ ಕೇಳಿಲ್ಲ. ಜಗಳ ಆಡಿ ಬಗೆಹರಿಸಿ ಅಂದ್ರೆ ನಮ್ಮ ಮನೆಯಲ್ಲೇ ಮಾಡೋದು. ಅಧ್ಯಕ್ಷ ಸ್ಥಾನ ಅನ್ನೋದು ಒಂದು ಸ್ಥಾನ. ಅದಕ್ಕೆ ಕೊಡುವ ಸ್ಥಾನ ಕೊಟ್ಟೇ ಕೊಡ್ತೀವಿ. ನ್ಯಾಯಪೀಠ ಬದಲಾಗಲ್ಲ. ನ್ಯಾಯಾಧೀಶರು ಬದಲಾಗ್ತಾರೆ. ಪೀಠ ಹಾಗೆ ಇರುತ್ತೆ. ಆ ಪೀಠಕ್ಕೆ ಕೊಡುವ ಗೌರವ ಕೊಟ್ಟೇ ಕೊಡ್ತೀವಿ. ನಮ್ಮ ಗುರಿ ಒಂದೇ. ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಬರಬೇಕು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ: ಸಿಎಂ ಸಿದ್ದರಾಮಯ್ಯ ನಾನು ಸಮಾಜವಾದದ ಹಿನ್ನೆಲೆಯವನು ಅಂತಾರೆ. 3-4 ಕೋಟಿ ಖರ್ಚು ಮಾಡಿ ಫರ್ನಿಚರ್ ತರೋದು ನಿಮ್ಮ ಸಮಾಜವಾದವಾ? ಎಂದು ಚಿಕ್ಕಮಗಳೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಸಮಾಜವಾದ ಅಂದ್ರೆ ಸರಳ ಅನ್ನೋದು ನಮಗೆ ಗೊತ್ತಿರೋದು. ನೀವು ಸಮಾಜವಾದದ ಪರಿಭಾಷೆಯನ್ನೂ ಬದಲಾಯಿಸಿದ್ರಿ. ಸಮಾಜವಾದ ಅಂದ್ರೆ ಎಷ್ಟಾಗುತ್ತೋ ಅಷ್ಟು ಕಂಡೋರ್ ದುಡ್ಡಲ್ಲಿ ಮಜಾ ಮಾಡೋದು. ನೀವು ಮಾಡಿದ್ದು ಸರಿಯಾ?. ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಬರ ಎಂದು ಸರ್ಕಾರ ಘೋಷಿಸಿದೆ. ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದಾಗ ಸಂಭ್ರಮವನ್ನೂ ದೂರ ಮಾಡ್ತಾರೆ. ರೈತರು ಸಂಕಷ್ಟದಲ್ಲಿದ್ದಾರೆ. ನವೆಂಬರ್​ನಲ್ಲೆ ಕುಡಿಯೋ ನೀರಿನ ಸಮಸ್ಯೆ, ಹಳ್ಳಿಗಳಲ್ಲಿ 2-3 ಗಂಟೆಯೂ ಕರೆಂಟ್ ಇಲ್ಲ. ರಾಜ್ಯ ಸಂಕಷ್ಟದಲ್ಲಿದ್ದಾಗ ಮನೆಗೆ ಕೋಟ್ಯಂತರ ರೂಪಾಯಿ ಪೀಠೋಪಕರಣ ತರ್ತಾರೆ.

ರೈತರಿಗೆ ಪರಿಹಾರ ಕೊಡಿ ಎಂದರೆ ಕೇಂದ್ರದತ್ತ ಕೈ ತೋರಿಸ್ತಾರೆ. ಇವರ ಮನೆಗೆ ಪೀಠೋಪಕರಣ ತರಲು ಯಾವ ಕಾರಣವೂ ಇಲ್ಲ. ಕೋಟ್ಯಂತರ ರೂಪಾಯಿ ಪೀಠೋಪಕರಣ ತರುವಷ್ಟು ಸಮೃದ್ಧಿಯ ಕಾಲವಾ?. ಜನರ ಕಷ್ಟ, ಸಂಕಷ್ಟಕ್ಕೂ ನಿಮಗೂ ಸಂಬಂಧವಿಲ್ಲ. ಬರಗಾಲಕ್ಕೂ - ಸರ್ಕಾರಕ್ಕೂ ಭಾವನೆಗಳೆ ಇಲ್ವಾ ಎಂದು ಚಿಕ್ಕಮಗಳೂರಿನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ: ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.