ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರ ಸರ್ಕಾರವಿದ್ದಾಗ ನಾನು ಕೂಡ ಮಂತ್ರಿಯಾಗಿದ್ದೆ. ಕಾಂಗ್ರೆಸ್ ಪಕ್ಷ ಬೆಂಬಲ ನೀಡಿ, ನೀವೇ ಮುಖ್ಯಮಂತ್ರಿ ಆಗಿ ಎಂದೂ ಹೇಳಿದ್ದೆವು. ಕೊನೆಯವರೆಗೂ ನಮ್ಮ ಮಂತ್ರಿ ಮಂಡಲದಲ್ಲಿ ಎಲ್ಲರೂ ಜೊತೆಗೆ ಇದ್ದೆವು. ಆಗ ಕಾಂಗ್ರೆಸ್ ಮೇಲೆ ಏನಾದರೂ ಆರೋಪ ಮಾಡಿದ್ರಾ? ಇವತ್ತು ಅನಿವಾರ್ಯವಾಗಿ ಆರೋಪ ಮಾಡುತ್ತಿದ್ದಾರೆ.
ಓದಿ: 'ನನ್ನ ಮಗಳು ಆತ್ಮಹತ್ಯೆ ಮಾಡ್ಕೊಂಡಿಲ್ಲ; ನನಗೆ ಆ ಇಬ್ಬರ ಮೇಲೆ ಅನುಮಾನವಿದೆ'
ರೈತರ ಬಿಲ್ ಬಗ್ಗೆ ಒಂದು ಬಾರಿ ಪರ, ಇನ್ನೊಂದು ಕಡೆ ವಿರೋಧ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಬೈಯ್ಯಲೇಬೇಕಾಗುತ್ತೆ. ಬೇರೆಯವರ ಬಳಿ ಹತ್ತಿರವಾಗಬೇಕಾದರೆ ನಮ್ಮನ್ನು ಬೈಯಲೇಬೇಕು. ಅದಕ್ಕೆ ಬೇರೆ ಕಾರಣ ಏನೂ ಇಲ್ಲ ಎಂದು ಹೇಳಿದರು.