ಚಿಕ್ಕಮಗಳೂರು: ಊರ ತುಂಬಾ ಹೋಟೆಲ್ ಇವೆ ಆದರೆ, ಕೊರೊನಾ ಕಾಲದಲ್ಲಿ ಯಾವೂ ಬಾಗಿಲು ತೆಗೆದಿಲ್ಲ. ದುಡ್ಡಿದ್ದರೂ ಒಂದು ತುತ್ತು ಅನ್ನ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಚಿಕ್ಕಮಗಳೂರು ನಗರದ ಯಾರೂ ಉಪವಾಸ ಇರಬಾರದು ಎಂದು ಸ್ಥಳೀಯ ಯುವಕ ತನೋಜ್ ಕುಮಾರ್ ಹಾಗೂ ಅವರ ತಂಡ ನಿನ್ನೆಯಿಂದ ನಗರದಲ್ಲಿ ಹಸಿದವರಿಗೆ ಮೂರು ಹೊತ್ತು ಊಟ ಕೊಡುತ್ತಿದ್ದಾರೆ.
ಮೂರು ಹೊತ್ತು ಕೂಡ ಒಂದೊಂದು ಬಗೆಯ ತಿಂಡಿ ಮಾಡಿಕೊಂಡು ಬೀದಿ-ಬೀದಿ, ಗಲ್ಲಿ-ಗಲ್ಲಿ ಸುತ್ತಿ ಊಟ ಹಂಚುತ್ತಿದ್ದಾರೆ. ನಿರ್ಗತಿಕರು, ಭಿಕ್ಷುಕರು ಸೇರಿದಂತೆ ಊಟ ಸಿಗದವರು, ಬ್ಯಾಚುಲರ್ಗಳು ಊಟದ ದಾರಿಯನ್ನೇ ಕಾಯುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲೂ ಕೂಡ ಇದೇ ತಂಡ 45 ದಿನಗಳ ಕಾಲ ನಿರಂತರ ಊಟ ನೀಡಿದ್ರು. ಈಗಲೂ ಎಷ್ಟು ದಿನ ವೀಕೆಂಡ್ ಕರ್ಫ್ಯೂ ಆಗುತ್ತೋ ಅಷ್ಟು ದಿನವೂ ಊಟ ನೀಡಲು ಸಿದ್ಧರಾಗಿದ್ದಾರೆ.