ETV Bharat / state

ಏನಿದು ವಿಚಿತ್ರ: ಬೆಂಕಿ ಹೊತ್ತಿ ಕೊಂಡಿದ್ದ ಬಸ್​ ಅಟೋಮೆಟಿಕ್​ ಸ್ಟಾರ್ಟ್​ ಅಂಡ್​​​ ರನ್​ ಆಗಿದ್ದು ಹೇಗೆ.. ಯಾಕೆ?

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಕಿ ಹೊತ್ತಿ ಕೊಂಡಿದ್ದ ಬಸ್​ವೊಂದು​ ಅಟೋಮೆಟಿಕ್ ​ ಸ್ಟಾರ್ಟ್​ ಆಗಿ ಮುಂದಕ್ಕೆ ಚಾಲನೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

bus automatic start and run in Chikmagalur, Bus burnt in Kottigehara petrol bunk, Bus fire caught on cctv in Chikkamagalur, Chikamagalur news, ಚಿಕ್ಕಮಗಳೂರಿನಲ್ಲಿ ಬಸ್​ ಅಟೋಮೆಟಿಕ್​ ಸ್ಟಾರ್ಟ್​ ಆ್ಯಂಡ್​ ರನ್, ಕೊಟ್ಟಿಗೆಹಾರದ ಪೆಟ್ರೋಲ್​ ಬಂಕ್​ನಲ್ಲಿ ಸುಟ್ಟು ಕರಕಲಾದ ಬಸ್​, ಚಿಕ್ಕಮಗಳೂರಿನಲ್ಲಿ ಬಸ್​ಗೆ ಬೆಂಕಿ ಬಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆ, ಚಿಕ್ಕಮಗಳೂರು ಸುದ್ದಿ,
ಬಸ್​ ಅಟೋಮೆಟಿಕ್​ ಸ್ಟಾರ್ಟ್​ ಆ್ಯಂಡ್​ ರನ್​
author img

By

Published : Jan 3, 2022, 7:36 AM IST

ಚಿಕ್ಕಮಗಳೂರು : ಇದ್ದಕ್ಕಿದ್ದಂತೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗ ಹೊತ್ತಿ ಉರಿದು ನಿಂತಿದ್ದ ಬಸ್ ಸ್ಟಾರ್ಟ್ ಆಗುತ್ತೆ. ಬಳಿಕ ಮುಂದಕ್ಕೆ ತೆರಳಿ ನಿಂತಿದ್ದ ಬಸ್​ವೊಂದಕ್ಕೆ ಡಿಕ್ಕಿ ಯಾಗಿರುವ ವಿಚಿತ್ರವಾದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬೆಳಕಿಗೆ ಬಂದಿದೆ.

v ಬಸ್​ ಅಟೋಮೆಟಿಕ್​ ಸ್ಟಾರ್ಟ್​ ಆ್ಯಂಡ್​ ರನ್​

ಕೊಟ್ಟಿಗೆಹಾರದ ದುರ್ಗಾಂಬ ಪೆಟ್ರೋಲ್ ಬಂಕ್​ನಲ್ಲಿ ನಿಲ್ಲಿಸಿದ ಬಸ್ ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ಆ ಬಳಿಕ ಬಸ್​ ಅಟೋಮೆಟಿಕ್​ ಸ್ಟಾರ್ಟ್​ ಆಗಿದ್ದು, ನಿಂತ ಜಾಗದಿಂದ ಮುಂದೆ ಬಂದು ಮತ್ತೊಂದು ಬಸ್​​​ಗೆ ಡಿಕ್ಕಿ ಹೊಡೆದಿದೆ. ಈ ವಿಚಿತ್ರ ಘಟನೆ ಹೊಸವರ್ಷ ಶನಿವಾರ ನಸುಕಿನ ಜಾವ 2 ಗಂಟೆಯ ಸುಮಾರು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಓದಿ: ಇಂದಿನಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಾರಂಭ

ಏನಿದು ಘಟನೆ...: ಬೆಂಕಿ ತಗುಲಿ ಬಸ್​​​ನ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶನಿವಾರ ಬೆಳಕಿಗೆ ಬಂದಿತ್ತು. ಪೆಟ್ರೋಲ್ ಬಂಕ್​ನ ಕೆಲಸಗಾರನ ಜಾಗರೂಕತೆಯಿಂದಾಗಿ ಮುಂದೆ ಸಂಭವಿಸುತ್ತಿದ್ದ ದೊಡ್ಡ ಅವಘಡವೊಂದು ತಪ್ಪಿತ್ತು. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದರು. ಈ ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

ಮೊದಲು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಬಸ್​ ಸುಟ್ಟು ಕರಕಲಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸಿಸಿಟಿವಿ ಬೆಳಕಿಗೆ ಬಂದ ನಂತರ ಗ್ರಾಮಸ್ಥರು ಶಾಕ್​ಗೆ ಗುರಿಯಾಗಿದ್ದಾರೆ.

ಓದಿ: ಮತ್ತೆ ಸಾವಿರ ಗಡಿ ದಾಟಿದ ಕೊರೊನಾ.. ರಾಜ್ಯದಲ್ಲಿಂದು 1187 ಮಂದಿಗೆ ಸೋಂಕು, 6 ಮಂದಿ ಬಲಿ

ಸಿಸಿಟಿವಿ ದೃಶ್ಯದಲ್ಲಿ ನಿಂತಿದ್ದ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಟಾರ್ಟ್ ಆಗಿ ಮುಂದೆ ಚಲಿಸಿ ಮತ್ತೊಂದು ಬಸ್​ಗೆ ಡಿಕ್ಕಿ ಹೊಡೆದಿರೋದು ಕಾಣಬಹುದಾಗಿದೆ. ಈ ಘಟನೆಯಿಂದ ಸ್ಥಳೀಯರು ಇದು ಯಾವುದಾದ್ರೂ ಕಾಣದ ಶಕ್ತಿಯ ಕಾಟ ಇರಬಹುದು ಎಂದು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.