ಚಿಕ್ಕಮಗಳೂರು: ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಮನನೊಂದ ರೈತ ಕಲ್ಟಿವೇಟರ್ ಹರಿಸಿ ನಾಶಪಡಿಸಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಗೊಂಡದಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ರೈತ ದೇವರಾಜ್ ನಾಶಪಡಿಸಿ ಆಕ್ರೋಶ ಹೊರಹಾಕಿದ್ದಾನೆ. ಕಳೆದ ವರ್ಷ ಇದೇ ವೇಳೆ ಪ್ರತಿ ಕೆ.ಜಿಗೆ 100 ರೂಪಾಯಿವರೆಗೂ ಧಾರಣೆ ಇತ್ತು. ಆದರೆ ಈ ಬಾರಿ ಈರುಳ್ಳಿಯನ್ನ ಕೇಳುವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
2 ಎಕರೆ ಭೂಮಿಯಲ್ಲಿ 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿಗೆ ಇದೀಗ 10 ಸಾವಿರ ಸಿಗುವುದು ಸಹ ಕಷ್ಟವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಶುಂಠಿ ಬೆಲೆಯಲ್ಲಿ ದಿಢೀರ್ ಕುಸಿತ.. ಉತ್ತಮ ಇಳುವರಿ ಬಂದರೂ ಕಂಗಾಲಾದ ಕೊಡಗು ರೈತರು