ETV Bharat / state

ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆ: ನರಳಿ ನರಳಿ ಕೊನೆಯುಸಿರೆಳೆದ ಗಜರಾಜ - Chikkmagaluru

ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆಯೊಂದು ನರಳಿ ನರಳಿ ಕೊನೆಯುಸಿರೆಳೆದಿದೆ. ನೋವು ಸಹಿಸಿಕೊಳ್ಳಲಾಗದೇ ಗಜರಾಜ ಬಿದ್ದ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.

ಆನೆ ಸಾವು
author img

By

Published : Jul 4, 2019, 12:04 PM IST

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದ ಸಮೀಪ ಬಂಡೆಯ ಮೇಲಿಂದ ದೈತ್ಯ ಗಾತ್ರದ ಗಂಡಾನೆಯೊಂದು ಕೆಳಗೆ ಬಿದ್ದು ಮೃತಪಟ್ಟಿದೆ.

Elephant death in Chikkmagaluru
ಮೃತಪಟ್ಟ ಆನೆಯನ್ನು ನೋಡಲು ಬಂದ ಸ್ಥಳೀಯರು

ಬಂಡೆ ಮೇಲಿಂದ ಬಿದ್ದ ನಂತರ ತುಂಬಾ ಸುಸ್ತಾಗಿ ಕೆಲ ಕ್ಷಣಗಳ ಕಾಲ ಸ್ಥಳದಲ್ಲಿಯೇ ನಿಂತಿತು. ಬಳಿಕ ಸುಧಾರಿಸಿಕೊಳ್ಳಲು ಆಗದೇ ನಿಧಾನವಾಗಿ ನಿತ್ರಾಣಕ್ಕೆ ಜಾರಿ ಕೆಳಗೆ ಬೀಳುವ ಮೂಲಕ ಪ್ರಾಣಬಿಟ್ಟಿದೆ. ಈ ಕರುಣಾಜನಕ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

Elephant death in Chikkmagaluru
ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆ

ಸುಮಾರು 45 ರಿಂದ 50 ಅಡಿ ಎತ್ತರದ ಬಂಡೆ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಆನೆ ಬಿದ್ದಿದೆ. ವನ್ಯ ಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆಯೇ ಈ ಅವಘಡ ಜರುಗಿದೆ. ಮೃತ ಆನೆಯ ನರಳಾಟ ನೋಡಿದ ಸ್ಥಳೀಯರು ಮಮ್ಮಲ ಮರುಗಿದ್ದಾರೆ.

ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ

Intro:R_Kn_Ckm_01_Anne death_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಒಂದು ಮನಕಲಕುವ ಘಟನೆ ನಡೆದು ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಹ್ಯಾರಂಭಿ ಗ್ರಾಮದ ಸಮೀಪ ಬಂಡೆಯ ಮೇಲಿಂದ ದೈತ್ಯ ಗಂಡಾನೆ ಕೆಳಗೆ ಬಿದ್ದು ಸ್ಥಳದಲ್ಲಿಯೇ ನರಳಿ ನರಳಿ ಕೊನೆಯುಸಿರು ಎಳೆದಿದೆ.ಬಂಡೆ ಮೇಲಿಂದ ಬಿದ್ದ ನಂತರ ತುಂಬಾ ಸುಸ್ತಾಗಿ ಕೆಲ ಕ್ಷಣಗಳು ಸ್ಥಳದಲ್ಲಿಯೇ ನಿಂತೂ ಸುಧಾರಿಸಿಕೊಳ್ಳಲು ಆಗದೇ ನಿಧಾನವಾಗಿ ನಿತ್ರಾಣಕ್ಕೆ ಜಾರಿ ಕೆಳಗೆ ಬೀಳುವುದರ ಮೂಲಕ ತನ್ನ ಕೊನೆಯುಸಿರು ಎಳೆಯುತ್ತಿರುವ ಕರುಣಾಜನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸುಮಾರು 45 ರಿಂದ 50 ಅಡಿಯ ಬಂಡೆ ಮೇಲಿಂದ ಕಾಲು ಜಾರಿ ಬಿದ್ದಿದ್ದು ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ವನ್ಯ ಜೀವಿ ವಿಭಾಗದ ಸಿಬ್ಬಂಧಿಗಳು ಕಾರ್ಯಚರಣೆ ನಡೆಸುವ ವೇಳೆ ಈ ಅವಘಡ ಜರುಗಿದ್ದು ಕೊನೆಗೂ ಬಂಡೆಯ ಮೇಲಿಂದ ಬಿದ್ದ ನೋವನ್ನು ಸಹಿಸಿಕೊಳ್ಳಲಾಗದೇ ದೈತ್ಯ ಗಾತ್ರದ ಗಜರಾಜ ಸ್ಥಳದಲ್ಲಿಯೇ ಕೊನೆಯುಸಿರುವ ಎಳೆದಿದೆ. ಈ ದೃಶ್ಯವನ್ನು ಖುದ್ದಾಗಿ ಗ್ರಾಮದ ಕೆಲ ಜನರು ಹಾಗೂ ಅರಣ್ಯ ಸಿಬ್ಬಂಧಿಗಳು ವೀಕ್ಷಣೆ ಮಾಡಿದ್ದಾರೆ...

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.