ETV Bharat / state

ತೋಟದ ಬೇಲಿ ವಿಚಾರವಾಗಿ ವೈದ್ಯನಿಗೆ ಚಾಕು ಇರಿದು ಹಲ್ಲೆ: ಆರೋಗ್ಯ ವಿಚಾರಿಸಿದ ಸಚಿವ ಗುಂಡೂರಾವ್​ - doctor was attacked with knife in chikkamagalur

ತೋಟದ ಬೇಲಿ ವಿಚಾರವಾಗಿ ಪಕ್ಕದ ತೋಟದ ಕಾರ್ಮಿಕ ವೈದ್ಯನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

ವೈದ್ಯನಿಗೆ ಚಾಕುವಿನಿಂದ ಇರಿದು ಹಲ್ಲೆ
ವೈದ್ಯನಿಗೆ ಚಾಕುವಿನಿಂದ ಇರಿದು ಹಲ್ಲೆ
author img

By ETV Bharat Karnataka Team

Published : Sep 15, 2023, 10:54 PM IST

ಚಿಕ್ಕಮಗಳೂರು: ಕಾಫಿನಾಡಲ್ಲಿ ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎನ್ಆರ್​ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ತೋಟದ ಬೇಲಿ ವಿಚಾರವಾಗಿ ವೈದ್ಯ ಗಣೇಶ್ ಎಂಬವರ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಹಾಗೂ ಪಕ್ಕದ ತೋಟದ ಕಾರ್ಮಿಕನ ಜೊತೆ ಜಗಳವಾಗುತ್ತಿತ್ತು. ವೈದ್ಯ ಗಣೇಶ್ ಅವರ ತೋಟದ ಕಾರ್ಮಿಕನ ಮೇಲೆ ಪಕ್ಕದ ತೋಟದ ಕಾರ್ಮಿಕ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.

ಈ ಘಟನೆಯನ್ನು ಕಾರ್ಮಿಕ ಕೂಡಲೇ ವೈದ್ಯ ಗಣೇಶ್ ಗಮನಕ್ಕೆ ತಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲು ಸ್ಥಳಕ್ಕೆ ಹೋದಾಗ, ಹಲ್ಲೆ ಮಾಡಿದ ಕಾರ್ಮಿಕ ವೈದ್ಯ ಗಣೇಶ್ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಹೊಟ್ಟೆ ಹಾಗೂ ಕೈಗೆ ಚಾಕುವಿನಿಂದ ಗಂಭೀರವಾಗಿ ಇರಿದಿದ್ದು, ಸ್ಥಳದಲ್ಲೇ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ.

ಕೂಡಲೇ ತೋಟದ ಕಾರ್ಮಿಕರು ಅವರನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇದೇ ವೇಳೆ ಆ ಭಾಗದಲ್ಲಿ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಯ ತಿಳಿದು ವೈದ್ಯರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಹಲ್ಲೆ ಮಾಡಿದ ಕಾರ್ಮಿಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಸದ್ಯ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವ ವೈದ್ಯ ಗಣೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಹಲ್ಲೆ ಮಾಡಿ ಪರಿಶೀಲನೆ ನಡೆಸಿದ್ದು, ಕಾರ್ಮಿಕನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಬಾರ್​ ಕ್ಯಾಶಿಯರ್​ ಮೇಲೆ ಹಲ್ಲೆ: ಮದ್ಯ ಕೊಡಲಿಲ್ಲ ಎಂದು ದುಷ್ಕರ್ಮಿಗಳು ಬಾರ್​ ಕ್ಯಾಶಿಯರ್​ಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಇತ್ತೀಚೆಗ ನಡೆದಿತ್ತು. ಬಾರ್ ಕ್ಲೋಸ್ ಮಾಡುವಾಗ ಬೈಕಿನಲ್ಲಿ ಮೂವರು ಆರೋಪಿಗಳು ಬಂದಿದ್ದರು. ಕ್ಲೋಸ್ ಮಾಡುತ್ತಿದ್ದ ಬಾರ್​ನ್ನು ತೆಗೆದು ಮದ್ಯ ನೀಡುವಂತೆ ಕೇಳಿದ್ದರು. ಇದಕ್ಕೆ ನಿರಾಕರಿಸಿದ್ದಕ್ಕೆ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ತಮ್ಮ ಬಳಿಯಿದ್ದ ಕ್ಯಾಶಿಯರ್​ನ ಹೊಟ್ಟೆಗೆ ಇರಿದಿದ್ದರು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿರಸಿ: ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.