ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಪುತ್ರಿಯ ವಿವಾಹ ವಿಚಾರವಾಗಿ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದಾರೆ.
ಮಗಳ ಮದುವೆ ಕುರಿತು ಡಿಕೆಶಿ ಅವರು ವಿನಯ್ ಗೂರುಜಿಯ ಅವರ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಾರ್ಚ್ 19ರಂದು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರ ಮಗಳ ಮದುವೆಗೆ ಬಂದಾಗ ಈ ವಿಚಾರವನ್ನು ಗುರೂಜಿ ಬಳಿ ಪ್ರಸ್ತಾಪ ಮಾಡಿದ್ದರು. ಸದ್ಯ ಡಿಕೆಶಿ ಮಗಳ ಮದುವೆಗೆ ವಿನಯ್ ಗುರೂಜಿ ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಈ ಹಿಂದೆ ದೂರವಾಣಿ ಮೂಲಕ ಮಗಳ ಮದುವೆ ವಿಚಾರವನ್ನು ಡಿಕೆಶಿ ಗುರೂಜಿ ಜೊತೆಗೆ ಮಾತನಾಡಿದ್ದರಂತೆ. ಸದ್ಯ ಮದುವೆಯ ವಿಚಾರ ಒಂದು ಹಂತಕ್ಕೆ ಬರುತ್ತಿದ್ದಂತೆ ಗುರೂಜಿಯ ಸಲಹೆ ಹಾಗೂ ಆರ್ಶಿವಾದ ಪಡೆದಿದ್ದಾರೆ.