ETV Bharat / state

ದೀಪಾವಳಿಯಂದು ಮಾತ್ರ ದರ್ಶನ ನೀಡುವ ದೇವಿರಮ್ಮ.. ಮಲ್ಲೇನಹಳ್ಳಿಗೆ ಹರಿದುಬಂದ ಭಕ್ತಸಾಗರ - Deviramma temple Chikkamagaluru

ಕಾಫಿ ನಾಡು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವನ್ನು ದೇವಿರಮ್ಮ ಬೆಟ್ಟ ಅಂತ, ಈ ದೇವಿಯನ್ನು ಬಿಂಡಿಗ ದೇವಿರಮ್ಮ ಎಂತಲೂ ಕರೆಯುತ್ತಾರೆ.

Devotees rush at Deviramma temple Chikkamagaluru
ದೇವಿರಮ್ಮ ದರ್ಶನಕ್ಕೆ ಹರಿದ ಬಂದ ಜನಸಾಗರ
author img

By

Published : Oct 24, 2022, 4:10 PM IST

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ದೀಪಾವಳಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ ಆರಂಭಗೊಳ್ಳುತ್ತದೆ. ಹಾಗಾಗಿ ಮುಂಜಾನೆ 4 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬೆಟ್ಟಕ್ಕೆ ಆಗಮಿಸುತ್ತಾರೆ. ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಇಂದು ದೇವಿಯ ದರ್ಶನ ಮಾಡಿದ್ದಾರೆ.

ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಪೂಜೆ ನಡೆಯುತ್ತದೆ. ಈ ಬೆಟ್ಟಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಬೆಟ್ಟಗುಡ್ಡಗಳನ್ನು ಅಲೆದಾಡಿಕೊಂಡೆ ಬರಬೇಕು. ಜತೆಗೆ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸ್ವೀಕರಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ದೇವರಿಗೆ ಪೂಜೆ ಸಲ್ಲಿಸಿ ಸಂಜೆ ಈ ಬೆಟ್ಟದಲ್ಲಿ ದೀಪ ಬೆಳಗಿದ ನಂತರವಷ್ಟೇ ಊಟ ಮಾಡಬೇಕು. ಬೆಟ್ಟದಲ್ಲಿ ದೀಪ ಬೆಳಗಿದ ಬಳಿಕ ಜನರು ಅದಕ್ಕೆ ಆರತಿ ಬೆಳಗಿ ಮನೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸುತ್ತಾರೆ.

ದೇವಿರಮ್ಮ ದರ್ಶನಕ್ಕೆ ಹರಿದ ಬಂದ ಜನಸಾಗರ

ಪೌರಾಣಿಕ ಹಿನ್ನೆಲೆ: ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ಉಗ್ರ ರೂಪ ತಾಳಿರುತ್ತಾಳೆ. ತನ್ನ ಕೋಪಕ್ಕೆ ಭಕ್ತರು ಸಿಲುಕಿಕೊಳ್ಳದಿರಲಿ ಎನ್ನುವ ಕಾರಣಕ್ಕೆ ಚಂದ್ರದ್ರೋಣ ಪರ್ವತದ ತಪ್ಪಲಿಗೆ ಬರುತ್ತಾಳೆ. ಈ ಪರ್ವತದಲ್ಲಿ ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಈ ಐದು ಜನ ತಪಸ್ವಿಗಳು ನೆಲೆಸಿರುತ್ತಾರೆ.

ಅವರಲ್ಲಿ ತಾಯಿಯು ತನಗೆ ನೆಲೆಸಲು ಸ್ಥಳ ನೀಡುವಂತೆ ಕೋರುತ್ತಾಳೆ. ತಾವು ಐದು ಜನ ಪುರುಷರಾಗಿದ್ದರಿಂದ ತಮ್ಮಿಂದ ಅಣತಿ ದೂರದಲ್ಲಿ ನೆಲೆಸುವಂತೆ ಈ ಬೆಟ್ಟವನ್ನು ತೋರಿಸುತ್ತಾರೆ. ಅದರಂತೆಯೇ ತಾಯಿ ಆ ಬೆಟ್ಟದಲ್ಲಿ ಹೋಗಿ ನೆಲೆಸುತ್ತಾಳೆ ಎಂಬ ಪ್ರತೀತಿ ಈ ಭಾಗದಲ್ಲಿದೆ.

ಇದನ್ನೂ ಓದಿ: ಬೆಟ್ಟವನ್ನೇರಿ ದೇವಿರಮ್ಮನ ದರ್ಶನ ಪಡೆದ ಸಹಸ್ರಾರು ಭಕ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.