ETV Bharat / state

ಭಕ್ತರಿಂದ ದತ್ತ ಪಾದುಕೆ ದರ್ಶನ: ದತ್ತಮಾಲಾ ಅಭಿಯಾನ ಸಂಪನ್ನ

ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆಯ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಇಂದು ಮುಕ್ತಾಯವಾಯಿತು. ಭಕ್ತಾದಿಗಳು ದತ್ತ ಪಾದುಕೆಯ ದರ್ಶನ ಪಡೆದರು.

ದತ್ತಮಾಲಾ ಅಭಿಯಾನ
author img

By

Published : Oct 13, 2019, 7:49 PM IST

Updated : Oct 13, 2019, 9:20 PM IST

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆಯ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಇಂದು ಮುಕ್ತಾಯವಾಯಿತು. ಭಕ್ತಾದಿಗಳು ದತ್ತ ಪಾದುಕೆಯ ದರ್ಶನ ಪಡೆದರು.

ದತ್ತಮಾಲಾ ಅಭಿಯಾನ ಸಂಪನ್ನ

ದತ್ತನ ವಿಗ್ರಹದ ಮೆರವಣಿಗೆಗೆ ಅನುಮತಿ ನೀಡದ ಹಿನ್ನೆಲೆ ಶೋಭಯಾತ್ರೆ ರದ್ದು ಮಾಡಿ, ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಮೌನವಾಗಿ ಮೆರವಣಿಗೆ ಮಾಡಲಾಯಿತು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮೆರವಣಿಗೆ ಜರುಗಿತು. ವಿಶೇಷವಾಗಿ ವಿವಿಧ ಮಠದ ಸ್ವಾಮೀಜಿಗಳು, ಸಂಘಟನೆಗಳ ಮುಖಂಡರು ಮುಂತಾದವರು ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದು ನಂತರ ದತ್ತ ಪೀಠದಲ್ಲಿ ಪಾದುಕೆ ದರ್ಶನ ಪಡೆಯಲಾಯಿತು.

Intro:Kn_Ckm_07_Datta Paduke darshan_7202347Body:ಚಿಕ್ಕಮಗಳೂರು :-

ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಇನಾಂ ದತ್ತಾತ್ರೆಯ ಪೀಠದಲ್ಲಿ ಶ್ರೀರಾಮ ಸೇನೆಯ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನವು ಇಂದು ಅಂತ್ಯಗೊಂಡಿತು. ದತ್ತಪಾದುಕೆಯ ದರ್ಶನ ಪಡೆದ ದತ್ತಭಕ್ತರಲ್ಲಿ ಹರ್ಷ ಮೂಡಿಸಿತ್ತು. ಪೀಠದ ಆವರಣದಲ್ಲಿ ಇರುವ ಶೆಡ್ ನಲ್ಲಿ ದತ್ತಮೂರ್ತಿಯ ಪೋಟೋವನ್ನಿಟ್ಟು ಪೂಜೆ, ಹೋಮ, ಹವನಗಳನ್ನು ನಡೆಸಲಾಯಿತು.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....

ಹೌದು ಹಲವು ವರ್ಷಗಳಿಂದ ಶ್ರೀರಾಮ ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದ ದತ್ತಮಾಲಾ ಅಭಿಯಾನವು ಇಂದು ಮುಕ್ತಾಯಗೊಂಡಿತು. ನಗರದ ಶಾರದ ಮಠದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದತ್ತನಾ ವಿಗ್ರಹದ ಮೆರವಣಿಗೆಗೆ ಅನುಮತಿ ನೀಡದ ಹಿನ್ನಲೆ ಶೋಭಯಾತ್ರೆ ರದ್ದು ಮಾಡಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಮೌನವಾಗಿ ಮೆರವಣಿಗೆ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಆರಂಭಗೊಂಡ ಮೆರವಣಿಗೆಯಲ್ಲಿ ವಿಶೇಷವಾಗಿ ವಿವಿಧ ಮಠದ ಸ್ವಾಮೀಜಿಗಳು ಸಂಘಟನೆಯ ಮುಖಂಡರು ಮುಂತಾದವರು ಪಾಲ್ಗೊಂಡಿದ್ರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದು ನಂತರ ದತ್ತಾಪೀಠದಲ್ಲಿ ಪಾದುಕೆಯ ದರ್ಶನವನ್ನು ಪಡೆಯಲಾಯಿತು.

ನಂತರ ದತ್ತಪೀಠಕ್ಕೆ ತೆರಳಿದ ದತ್ತಮಾಲಾ ಧಾರಿಗಳು ದತ್ತಪಾದುಕೆಯ ದರ್ಶನವನ್ನು ಪಡೆದ್ರು. ದತ್ತಪಾದುಕೆಯ ದರ್ಶನ ಪಡೆದ ದತ್ತಭಕ್ತರಲ್ಲಿ ಹರ್ಷ ಮೂಡಿಸಿತ್ತು.ದತ್ತಪೀಠ ಹಿಂದೂಗಳ ಪೀಠವಾಗಬೇಕು ಎನ್ನುವ ಘೋಷಣೆ ದತ್ತಭಕ್ತರಿಂದ ಕೇಳಿಬಂತು. ಇನ್ನು ದತ್ತಪೀಠದ ಪೂರ್ವದಿಕ್ಕಿನಲ್ಲಿ ಇರುವ ಶೆಡ್ ನಲ್ಲಿ ಹವನಗಳನ್ನು ನಡೆಸಿ, ದತ್ತಮೂರ್ತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧರ್ಮ ಸಭೆಯನ್ನು ನಡೆಸಿದರು. ಭಕ್ತಾಧಿಗಳು ಗುಹೆಯೊಳಗೆ ಪ್ರವೇಶ ಮಾಡಿ ದತ್ತಾ ಪಾದುಕೆಯ ದರ್ಶನವನ್ನು ಪಡೆದು ಧನ್ಯರಾದರು.

ಒಟ್ಟಾರೆಯಾಗಿ ಶ್ರೀರಾಮ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನವು ಬಿಗಿ ಪೋಲಿಸ್ ಭದ್ರತೆಯೊಂದಿಗೆ ಶಾಂತಿಯುತವಾಗಿ ಅಂತ್ಯಕಂಡಿದೆ. ಈ ಬಾರಿಯ ಅಭಿಯಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ದತ್ತಮಾಲಾ ಧಾರಿಗಳ ಅಭಿಯಾನದಲ್ಲಿ ಭಾಗವಹಿಸಿದ್ದರು.ದತ್ತಾ ಫೀಠದ ಹೊರಭಾಗದ ಶೇಡ್ ನಲ್ಲಿ ಹೋಮ ಹವನ ನಡೆಸಿ ದತ್ತಾತ್ರೇಯನ ಬಗ್ಗೆ ಬಂದಿದ್ದಂತಹ ಭಕ್ತರಿಗೆ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ದತ್ತ ಭಕ್ತರಲ್ಲಿ ಹರ್ಷ ಮೂಡಿಸಿತ್ತು....

Conclusion:ರಾಜಕುಮಾರ್.......
ಈ ಟಿವಿ ಭಾರತ್.....
ಚಿಕ್ಕಮಗಳೂರು.......
Last Updated : Oct 13, 2019, 9:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.