ಚಿಕ್ಕಮಗಳೂರು : ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಶಾಸಕ ಸಿ.ಟಿ ರವಿ ಕಿಡಿಕಾರಿದ್ದಾರೆ. ಹಿಜಾಬ್ ವಿವಾದದ ಮೂಲಕ ಕಾಂಗ್ರೆಸ್ ಮತೀಯವಾದವನ್ನು ಹೊರ ಹಾಕಿದೆ. ಕಾಂಗ್ರೆಸ್ ನ ಜಾತ್ಯಾತೀತವಾದ ಅನ್ನೋದು ನಾಟಕ ಮಾತ್ರ. ಹಿಂದೂಗಳನ್ನು ಮೋಸ ಮಾಡುವುದಕ್ಕೆ ಈ ಜಾತ್ಯಾತೀತವಾದವನ್ನು ಬಳಕೆ ಮಾಡುತ್ತಿರುವುದು, ಹಿಂದುಗಳ ಮೇಲೆ ಪ್ರಹಾರ ಮಾಡುವುದಕ್ಕೆ ಮಾತ್ರ. ಕಾಂಗ್ರೆಸ್ ನ ಜಾತ್ಯಾತೀತವಾದ ನಿಲುವು ಹೊಂದಿರುವುದು ಎಂದು ಅವರು ಹೇಳಿದ್ದಾರೆ.
ಕೇಸರಿ ಶಾಲು ತಿರಸ್ಕರಿಸುವ ಸಿದ್ದರಾಮಯ್ಯ ಮುಸ್ಲಿಂ ಧರ್ಮದ ಟೋಪಿ ಧರಿಸುತ್ತಾರೆ. ಕೇಸರಿ ಪೇಟವನ್ನು ನೋಡಿದ್ರೆ ಉರಿದು ಬೀಳುವ ಸಿದ್ದರಾಮಯ್ಯ, ಸ್ಕಲ್ ಟೋಪಿ ಧರಿಸುತ್ತಾರೆ. ಹಾಗಾಗಿ ಅವರನ್ನು ಜಾತ್ಯಾತೀತವಾದಿ ಎನ್ನುವುದು ತಪ್ಪು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಓರ್ವ ಮತೀಯವಾದಿ, ಅವರು ತಾಲಿಬಾನ್ ಕ್ಕಿಂತ ಕಡಿಮೆ ಇಲ್ಲದ ಮನಸ್ಥಿತಿಯವರು. ಕೇಸರಿ ಪೇಟ ನೋಡಿ ಸಿದ್ದರಾಮಯ್ಯ ನವರು ಉರಿದು ಬಿದ್ದಿದ್ದರು. ಇಲ್ಲಿ ಸ್ಕಲ್ ಟೋಪಿ ಹಾಕಿಕೊಂಡು ಹೋಗಿದ್ದು ನೋಡಿದಾಗ ಅವರು ಜಾತ್ಯಾತೀತ ಎಂದು ಯಾವ ಲೇಬಲ್ ನಲ್ಲಿ ಬರೆದುಕೊಂಡರೂ ನಂಬುವುದಕ್ಕಾಗಲ್ಲ ಎಂದು ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಕುಂಕುಮ ಕಂಡರೆ ಹೆದರಿಕೆ ಆಗುತ್ತೆ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಅವರ ತಾಯಿಯ ಹಣೆಯಲ್ಲಿ ಕುಂಕುಮ ಇದೆ, ಪತ್ನಿಯ ಹಣೆ ಮೇಲೂ ಕುಂಕಮ ಇದೆ. ಈ ಕುಂಕುಮದಿಂದ ಜಗತ್ತಿನಲ್ಲಿ ಎಲ್ಲೂ ಭಯೋತ್ಪಾದನೆ ನಡೆದಿಲ್ಲ. ಸ್ಕಲ್ ಟೋಪಿಯ ಜನ ತಮ್ಮವರನ್ನು ಕೊಂದಿದ್ದಾರೆ ಬೇರೆಯವರನ್ನೂ ಕೊಂದಿದ್ದಾರೆ. ಬಹುಶಃ ಇವುಗಳನ್ನೆಲ್ಲ ನೋಡಿದ್ದರೆ ಅವರ ತಂದೆ ಸಿದ್ದರಾಮಯ್ಯ ಎಂದು ಹೆಸರು ಇಡುತ್ತಾ ಇರಲಿಲ್ಲ. ಹಿಂದೆ ರಾಮನ ಹೆಸರು ಇದೆ. ಅಂದಿನ ಕಾಲದ ಸಮಾಜ ಸುಧಾರಕ ಸಿದ್ದರಾಮನ ಹೆಸರಿದೆ. ನಡೆದುಕೊಳ್ಳುವ ರೀತಿಗೂ ಅವರಿಗೂ ಸಂಬಂಧ ಇಲ್ಲ ಅನ್ನೋದು ವ್ಯಕ್ತವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುಟುಕಿದರು.
ಓದಿ : ಮಧ್ಯಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ : ಮೂವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ