ಚಿಕ್ಕಮಗಳೂರು: ರಾಮಮಂದಿರಕ್ಕೆ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು? ಎಂದು ಲೆಕ್ಕ ಕೇಳಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಚಾರದ ತೆವಲಿಗೆ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಸ್ಪಷ್ಟತೆ ಹಾಗೂ ನಿರ್ದಿಷ್ಟ ಉದ್ದೇಶಗಳಿಲ್ಲ. ನಾವು ರಾಮಮಂದಿರ ಹೋರಾಟ ಮಾಡುವಾಗ ನೀವು ಮಸೀದಿ ಜಪ ಮಾಡುತ್ತಿದ್ರಿ. ನಾವು ಮನೆ - ಮನೆಗೆ ಹೋಗಿ ರಾಮ ಮಂದಿರದ ವಿಚಾರ ತಿಳಿಸುತ್ತಿದ್ದೆವು. ನೀವು ಟೋಪಿ ಹಾಕೊಂಡು ನಮಾಜ್ ಮಾಡೋಕೆ ಹೋಗುತ್ತಿದ್ದಿರಿ.
ರಾಮಮಂದಿರಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರವಿದೆ. ನೀವು ಎಷ್ಟು ಹಣ ಕೊಟ್ಟಿದ್ದೀರಿ?, ಕೊಟ್ಟಿರುವ ಹಣದ ಲೆಕ್ಕ ಹೇಳಿ. ಆಮೇಲೆ ರಾಮಮಂದಿರದ ಲೆಕ್ಕ ಕೇಳಿ. ರಾಮ ಮಂದಿರದ ಹಣವನ್ನ ದುರುಪಯೋಗ ಮಾಡಲು ಫ್ಯಾಮಿಲಿ ಖಾನ್ ದಾನ್ ಅಲ್ಲಿಲ್ಲ. ರಾಮಮಂದಿರ ಹೋರಾಟದಲ್ಲಿ ನಿಮ್ಮ ಪಾತ್ರ ಏನು ತಿಳಿಸಿ ಎಂದು ಸಿ.ಟಿ ರವಿ ಸವಾಲು ಹಾಕಿದರು. ರಾಮಮಂದಿರದ ನಿರ್ಮಾಣ ನೋಡಿ ಸಂಕಟ ಆಗ್ತಿದ್ಯಾ?. ಮಂದಿರದ ನಿರ್ಮಾಣವಾದ ಮೇಲೆ ಪೂಜೆಗೆ ಬನ್ನಿ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹಿಂದೂ ದೇವಾಲಯಗಳನ್ನ RSSನವರೇನು ಗುತ್ತಿಗೆ ತೆಗೆದುಕೊಂಡಿದ್ದಾರಾ.. ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ