ETV Bharat / state

ನಾವು ಪರೇಶ್ ಮೇಸ್ತ ಕುಟುಂಬದ ಪರ ನಿಲ್ಲುತ್ತೇವೆ: ಸಿ ಟಿ ರವಿ

ಸಿದ್ದರಾಮಯ್ಯ ತಮ್ಮೆಲ್ಲಾ ಪಾಪದಿಂದ ಮುಕ್ತನಾಗಿದ್ದೇನೆ ಎಂದು ಭಾವಿಸುವುದು ಬೇಡ. ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವವರಿಗೆ ಸುಳ್ಳಿನ ತಲೆ ಮೇಲೆ ಹೊಡೆದಂಗೆ ಹೇಳೋಕೆ ಬರುತ್ತದೆ. ಮೇಲ್ಮನವಿ, ಮರು ತನಿಖೆಗೆ ಪರೇಶ್ ಮೇಸ್ತ ಕುಟುಂಬ ಬಯಸಿದ್ರೆ ಅವರ ಜೊತೆ ನಿಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

ct ravi
ಸಿಟಿ ರವಿ
author img

By

Published : Oct 5, 2022, 6:49 AM IST

ಚಿಕ್ಕಮಗಳೂರು: ನಾವು ಪರೇಶ್ ಮೇಸ್ತ ಕುಟುಂಬದ ಪರ ನಿಲ್ಲುತ್ತೇವೆ. ಮೇಲ್ಮನವಿ, ಮರು ತನಿಖೆಗೆ ಕುಟುಂಬ ಬಯಸಿದ್ರೆ ಅವರ ಜೊತೆ ನಿಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಕೊಡಗು ಜಿಲ್ಲೆಯಲ್ಲಿ ಡಿವೈಎಸ್​ಪಿ ಗಣಪತಿ ಅವರು ಲೈವ್ ಸ್ಟೇಟ್ಮೆಂಟ್ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಲೈವ್ ಸ್ಟೇಟ್‌ಮೆಂಟ್‌ ಡೆತ್‌ ಸ್ಟೇಟ್‌ಮೆಂಟ್‌ ಎಂದು ಪರಿಗಣನೆ ಮಾಡ್ತಾರೆ. ಆದರೆ, ಆ ಸ್ಟೇಟ್‌ಮೆಂಟ್‌ಗೂ ಸಿಬಿಐ ಬಿ ರಿಪೋರ್ಟ್ ಕೊಟ್ಟಿದೆ. 55 - 60 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಪಕ್ಷದ ಬೇರು - ಬಾಹು ಎಲ್ಲೆಲ್ಲಿ ಇದೆಯೋ?, ಕಾಂಗ್ರೆಸ್‌ನ ಪ್ರಭಾವ ವಲಯ ಎಲ್ಲೆಲ್ಲಿದೆಯೋ ಹೇಳಕ್ಕಾಗಲ್ಲ, ಅಷ್ಟನ್ನು ಹೇಳ್ತೀನಿ ಎಂದರು.

ಸಿ ಟಿ ರವಿ ಪ್ರತಿಕ್ರಿಯೆ

ಎಷ್ಟೋ ಪ್ರಕರಣಗಳು ರೀ ಓಪನ್ ಆಗಿ ಹತ್ತಾರು ವರ್ಷಗಳ ಬಳಿಕ ಶಿಕ್ಷೆಯಾಗಿದೆ. ಸಿದ್ದರಾಮಯ್ಯ ತಮ್ಮೆಲ್ಲಾ ಪಾಪದಿಂದ ಮುಕ್ತನಾಗಿದ್ದೇನೆ ಎಂದು ಭಾವಿಸುವುದು ಬೇಡ. ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವವರಿಗೆ ಸುಳ್ಳಿನ ತಲೆ ಮೇಲೆ ಹೊಡೆದಂಗೆ ಹೇಳೋಕೆ ಬರುತ್ತೆ ಎಂದು ಸಿ ಟಿ ರವಿ ಕಿಡಿಕಾರಿದರು.

ಇದನ್ನೂ ಓದಿ: ಪರೇಶ್ ಮೇಸ್ತ ಪ್ರಕರಣ: ಬಿಜೆಪಿ ನಾಯಕರು ಮೀನುಗಾರರ, ಸಾರ್ವಜನಿಕರ ಕ್ಷಮೆಯಾಚಿಸಲಿ-ಯುಟಿ‌ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.