ಚಿಕ್ಕಮಗಳೂರು: ಸ್ವಾಮೀಜಿಗೆ ಯಾರೇ ಅಗೌರವ ತೋರಿದರೂ ತಪ್ಪು ಎಂದು ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ವಾಮೀಜಿ ಅವರಿಗೆ ಲೇ ಸ್ವಾಮಿ ಕುತ್ಕೋ ಎಂದು ಹೇಳಿದ್ದರು. ನಾನು ಅದನ್ನು ಟಿವಿಯಲ್ಲಿ ನೋಡಿದ್ದೆ, ಆದರೇ ಮಾಧುಸ್ವಾಮಿ ಆ ರೀತಿ ಮಾಡಿದ್ದಾರೆ ಅನ್ನಿಸುವುದಿಲ್ಲ ಎಂದರು.
ಅದು ತಪ್ಪು, ಇದು ತಪ್ಪು ಯಾರೂ ಮಾಡಿದ್ರೂ ತಪ್ಪೇ ಇದರ ಕುರಿತಾಗಿ ಈಗಾಗಲೇ ಮುಖ್ಯಮಂತ್ರಿಗಳೇ ಕ್ಷಮೆ ಕೇಳಿದ್ದಾರೆ. ಇನ್ನು ಈ ವಿಚಾರವನ್ನು ಬೆಳೆಸಿದರೆ ಅದು ರಾಜಕೀಯ ಕಾರಣಕ್ಕೆ ಮಾತ್ರ ಎಂದೂ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಎಳೆಯುವ ಪ್ರಯತ್ನ ಮಾಡಿದರು.