ಚಿಕ್ಕಮಗಳೂರು: ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ, ಅತ್ತೆ-ಸೊಸೆ ಜಗಳವಾಡಲಿ ಎಂದು ಹೇಳೂ ಇಲ್ಲ, ಬಯಸೂ ಇಲ್ಲ ಎಂದೂ ಡಿ ಕೆ ರವಿ ಪತ್ನಿ ಕುಸುಮಾ ಹಾಗೂ ಅವರ ತಾಯಿ ಬಗ್ಗೆ ಚಿಕ್ಕಮಗಳೂರಿಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಮಗೆ ಯಾರ ಮೇಲೂ ವ್ಯಕ್ತಿಗತವಾದ ವಿರೋಧ, ದ್ವೇಷ ಇಲ್ಲ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಮಾತ್ರ. ನಾವು ನಮ್ಮ ಪಕ್ಷಗೆಲ್ಲಬೇಕೆಂದು ಬಯಸುತ್ತೇವೆ. ಅತ್ತೆ-ಸೊಸೆ ತಾಯಿ ಮಕ್ಕಳಂತೆ ಇರಬೇಕೆಂಬುದು ನಮ್ಮ ಬಯಕೆ. ಅವರು ಚುನಾವಣೆ ನಂತರವೂ ಜಗಳ ಆಡಬಾರದು ಕುಸುಮಾ ಪರ ಅವರ ತಾಯಿ ಮತ ಕೇಳಿರೋದು ಚುನಾವಣೆ ಮೇಲೆ ಯಾವ ಪರಿಣಾಮ ಬೀರಲ್ಲ. ಮುಖ ನೋಡಲ್ಲ ಅಂತಿದ್ದೋರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದು ಹೇಳಿದರು.
ನಂತರ ಬಿಹಾರದ ಚುನಾವಣೆ ಬಗ್ಗೆ ಮಾತನಾಡಿ, ಬಿಹಾರದಲ್ಲಿ ಮತ್ತೆ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ, ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ ಎಂದೂ ಎನ್ನುತ್ತಿದ್ದಾರೆ. ಆತಂರಿಕ ವರದಿ ನಿತೀಶ್ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದೆ. ಪ್ರಧಾನಿ ರ್ಯಾಲಿಗೆ ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ಜನರಿಗೆ ಕೇಂದ್ರದ ಯೋಜನೆಯ ಲಾಭ ತಲುಪಿದೆ. ಇದರಿಂದ ಸೈಲೆಂಟ್ ಓಟರ್ಸ್, ಮಹಿಳೆಯರು ಬಿಜೆಪಿಗೆ ಮತ ಹಾಕ್ತಾರೆ ಗೂಂಡಾ ರಾಜ್ಯ ಕಂಡವರಿಗೆ ನಿತೀಶ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ, ಕೆಲಸ ಆಗ್ತಿರೋದು ಮತವಾಗಿ ಪರಿಣಮಿಸುತ್ತೆ ಎಂದರು.
ಆರ್.ಆರ್ ನಗರ 25 ಸಾವಿರ, ಶಿರಾದಲ್ಲಿ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ. ಕಾಂಗ್ರೆಸ್ ಸೋಲುವ ಗ್ಯಾರಂಟಿಯಲ್ಲಿ ಇವಿಎಂ ಮೇಲೆ ಆರೋಪಿಸುತ್ತಿದೆ. ಕಾಂಗ್ರೆಸ್ ಗೆದ್ದರೇ ಜನಾದೇಶ, ಸೋತ್ರೆ ಇವಿಎಂ ಅಂತಾರೆ. ಈ ರೀತಿಯ ಜನರನ್ನ ನೀವೆಲ್ಲೂ ನೋಡಲು ಸಾಧ್ಯವಿಲ್ಲ. ಇವಿಎಂಗೆ ನೆಟ್ ಇರಲ್ಲ, ಈ ಆರೋಪಕ್ಕೆ ಅವರು ಸಾಕ್ಷಿ ನೀಡಿಲ್ಲ. ಚುನಾವಣಾ ಆಯೋಗದ ನೋಟೀಸ್ ಉತ್ತರಿಸಲಾಗದೆ ತಡ ಬಡಿಸಿದ್ದರು. ಕಾಂಗ್ರೆಸ್ಸಿಗೆ ಇದೊಂದು ಕೆಟ್ಟ ಖಾಯಿಲೆ ನ್ಯಾಯಾಲಯದ ತೀರ್ಪು ಬಂದರೆ ನ್ಯಾಯಾಧೀಶರನ್ನು ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಆಯೋಗ, ಇವಿಎಂ ಮೇಲೆ ಗೂಬೆ ಕೂರಿಸೋದು. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದಾಗ ಏನ್ ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ಗೆದ್ದದ್ದು ಎಂದೂ ಹೇಳಿದರು.
ತಮ್ಮ ಸಚಿವ ಸ್ಥಾನದ ಕುರಿತು ಮಾತನಾಡಿದ ಸಿ ಟಿ ರವಿ, ನಾನು ಹೊಗಳಿಸಿಕೊಂಡು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ. ಹಾಗೆ ಮಾಡಿದ್ರೆ 2012 ಕ್ಕೂ ಮೊದಲೇ ಮಂತ್ರಿಯಾಗುತ್ತಿದ್ದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಜಯಮಾನ ನನ್ನದಲ್ಲ. ಮಂತ್ರಿ ಸ್ಥಾನ ನನಗೆ ಸಿಕ್ಕಿರುವ ಅಧಿಕಾರ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರೋ ಜವಾಬ್ದಾರಿ. ಈ ಎರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಅಧಿಕಾರದ ವ್ಯಾಮೋಹ ಜವಾಬ್ದಾರಿಯ ಕೆಲಸಕ್ಕೆ ಹಿನ್ನೆಡೆ ಆಗಬಾರದು. ನಿನ್ನೆ ಕೂಡ ನನ್ನ ರಾಜೀನಾಮೆ ಅಂಗೀಕರಿಸುವಂತೆ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.