ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಾರ್ಚ್ 5ರಿಂದ ಮೇ ಕೊನೆಯವರೆಗೆ ಒಟ್ಟು 90 ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರ್ಸಿಹೆಚ್ಒ ಭರತ್ ತಿಳಿಸಿದ್ದಾರೆ.
ಈ ಪೈಕಿ 8 ಗರ್ಭಿಣಿಯರಿಗೆ ಈಗಾಗಲೇ ಹೆರಿಗೆಯಾಗಿದೆ. ನಾಲ್ಕು ಸಹಜ ಹಾಗೂ ನಾಲ್ಕು ಸಿಜೇರಿಯನ್ ಹೆರಿಗೆಯಾಗಿದೆ. ಇದರಲ್ಲಿ ಒಂದು ಮಗುವಿನಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದೆ.
8 ಗರ್ಭಿಣಿಯರು ಸದ್ಯ ಸೋಂಕಿನಿಂದ ಮುಕ್ತರಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಸಿಜೇರಿಯನ್ ಹೆರಿಗೆ ಆಗುವಂತಿದ್ದರೆ ತಾಲೂಕು ಅಥವಾ ಜಿಲ್ಲಾಮಟ್ಟದ ಆಸ್ವತ್ರೆಗೆ ಕಳುಹಿಸಲಾಗುತ್ತದೆ. ಅವರಿಗಾಗಿಯೇ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ಮೂರನೇ ಅಲೆ ಬಗ್ಗೆಯೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಮಕ್ಕಳು ತಜ್ಞರು ಹೇಳಿರುವ ಮಾಹಿತಿ ಪ್ರಕಾರ ಜಾಗೃತಿ ವಹಿಸಲಾಗಿದೆ. ಮಕ್ಕಳಿಗೆ ಇರುವ ತೊಂದರೆಗಳ ಬಗ್ಗೆಯೂ ಪಟ್ಟಿ ಮಾಡಲಾಗಿದೆ. ಈ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಲಾಗಿದೆ ಎಂದು ಆರ್ಸಿಹೆಚ್ಒ ತಿಳಿಸಿದ್ದಾರೆ.
ಓದಿ: ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಪರೋಕ್ಷ ಹೇಳಿಕೆ ನೀಡಿದ ಶಾಸಕ ಸಾ.ರಾ.ಮಹೇಶ್