ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು 89 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,496ಕ್ಕೆ ಏರಿಕೆಯಾಗಿದೆ.
ಇಂದು 35 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 634 ಜನ ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 41, ಕಡೂರು 21, ತರೀಕೆರೆ 12, ಮೂಡಿಗೆರೆ 9, ಅಜ್ಜಂಪುರ 03, ಕೊಪ್ಪ 01, ಎನ್.ಆರ್.ಪುರ ತಾಲೂಕಿನ ಇಬ್ಬರಿಗೆ ಸೋಂಕು ತಗುಲಿದೆ.
ಇಂದು ಇಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಒಟ್ಟು 793 ಸಕ್ರಿಯ ಪ್ರಕರಣಗಳಿವೆ.