ಚಿಕ್ಕಮಗಳೂರು: ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ರೈತರು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಇದರಿಂದ ಅಜ್ಜಂಪುರದ ರೈತನೋರ್ವ ಬೀದಿಗೆ ಬೀಳುವಂತಾಗಿದ್ದು, 34 ಲಕ್ಷ ಮೌಲ್ಯದ ಪಾಲಿ ಹೌಸ್ ಸಂಪೂರ್ಣ ನೆಲಸಮವಾಗಿದೆ.
3 ಲಕ್ಷ ಟೊಮ್ಯಾಟೊ ಗಿಡಗಳು ಹಾಗೂ ಬೆಳೆ ನಾಶವಾಗಿದ್ದು, ಅಜ್ಜಂಪುರ ತಾಲೂಕಿನ ಮಂಜುನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾರಿ ಗಾಳಿ ಮಳೆಗೆ ರೈತ ಸುದರ್ಶನ್ ಎಂಬುವರ ಪಾಲಿ ಹೌಸ್ ನರ್ಸರಿ ಮಗುಚಿ ಬಿದ್ದಿದೆ. ಪರಿಹಾರಕ್ಕಾಗಿ ಸರ್ಕಾರದ ಬಳಿ ರೈತ ಅಳಲು ತೋಡಿಕೊಳ್ಳುವಂತಾಗಿದೆ.
ಆತ್ಮಹತ್ಯೆ ಒಂದೇ ದಾರಿ ಎಂದು ರೈತ ಕಣ್ಣೀರು ಹಾಕುತ್ತಿದ್ದು, ಪರಿಹಾರಕ್ಕಾಗಿ ಕೃಷಿ ಸಚಿವರ ಬಳಿ ರೈತ ಮನವಿ ಮಾಡುತ್ತಿದ್ದಾನೆ.
ಪಾಲಿ ಹೌಸ್ ನಿರ್ಮಿಸಿಕೊಟ್ಟಿದ್ದ ಏಜೆನ್ಸಿಯಿಂದಲೂ ರೈತನಿಗೆ ವಂಚನೆಯಾಗಿದೆ ಎಂದು ಹೇಳಲಾಗುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ರೈತ ಮನವಿ ಮಾಡಿದ್ದಾನೆ.