ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿ ಅಂಗವಾಗಿ ಕೆಂಪನಹಳ್ಳಿ ಆಶಾ ಕಿರಣ ಶಾಲೆಯ ಅಂಧ ಮಕ್ಕಳು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಶಾಲಾ ಆವರಣ ಸ್ವಚ್ಚತಾ ಕಾರ್ಯ ಮಾಡಿದರು.
ಕಾರ್ಯಕ್ರಮದಲ್ಲಿ ನೂರಾರು ಅಂಧ ಮಕ್ಕಳು ಭಾಗವಹಿಸಿ ಶಾಲಾ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದ ಚರಂಡಿ, ರಸ್ತೆಯ ಪಕ್ಕ ಬಿದ್ದಿರುವಂತಹ ಪ್ಲಾಸ್ಟಿಕ್ ವಸ್ತುಗಳನ್ನು ತೆರವು ಮಾಡುವುದರ ಮೂಲಕ ಸ್ವಚ್ಚಗೊಳಿಸಿದರು.

ಸ್ವಚ್ಚತಾ ಕಾರ್ಯದಲ್ಲಿ ಕೆಂಪನ ಹಳ್ಳಿಯ ಗ್ರಾಮಸ್ಥರೂ ಭಾಗವಹಿಸಿ ಮಕ್ಕಳ ಕಾರ್ಯಕ್ಕೆ ಸಾಥ್ ನೀಡಿದರು.