ETV Bharat / state

ಚಿಕ್ಕಮಗಳೂರು ಮಳೆ ಹಾನಿ : ಅಧ್ಯಯನಕ್ಕೆ ಆಗಮಿಸಿದ ವಿಜ್ಞಾನಿಗಳ ತಂಡ - Karnataka Flood

ಚಿಕ್ಕಮಗಳೂರು ಜಿಲ್ಲೆಯ ಮಳೆಹಾನಿ ಸಂಭವಿಸಿದ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳ ತಂಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಧ್ಯಯನ ಕೈಗೊಂಡಿದ್ದು, ಮಳೆ ಹಾನಿಯ ವೈಜ್ಞಾನಿಕ ಕಾರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಅಧ್ಯಯನಕ್ಕೆ ಆಗಮಿಸಿದ ವಿಜ್ಞಾನಿಗಳ ತಂಡ
author img

By

Published : Aug 22, 2019, 2:39 PM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ವಿಜ್ಞಾನಿಗಳು ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದಾರೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್‍ಕುಮಾರ್ ಹಾಗೂ ಚಿಕ್ಕಮಗಳೂರಿನ ಭೂ ವಿಜ್ಞಾನಿಯಾ ದಯಾನಂದ್, ಎಂಜಿನಿಯರ್ ರಾಘವನ್ ತಂಡ ಅಧ್ಯಯನ ಆರಂಭಿಸಿದೆ.

ಆಗಸ್ಟ್ 2 ರಿಂದ 12 ರವರೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಾರಿ ಮಳೆ ಹಾಗೂ ಗುಡ್ಡ ಕುಸಿತದ ಪರಿಣಾಮ 10 ಮಂದಿ ಮೃತಪಟ್ಟಿದ್ದರು. ಮತ್ತು ಹಲವೆಡೆ ಕಾಫಿ, ಅಡಿಕೆ ತೋಟ, ಗದ್ದೆಗಳು ಜಲಾವೃತವಾಗಿ ಜನ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಮಲೆಮನೆ, ಚನ್ನಹಡ್ಲು, ಆಲೇಖಾನ್ ಹೊರಟ್ಟಿ, ಕಳಸ ಸಮೀಪದ ಹಿರೇಬೈಲು, ಮಲ್ಲೇಶ್ವರ ಗುಡ್ಡ ಸೇರಿದಂತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದರಿಂದ ಆ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದ ದುರಂತದ ವೈಜ್ಞಾನಿಕ ಕಾರಣ ತಿಳಿಯಲು ವಿಜ್ಞಾನಿಗಳ ತಂಡ ಆಗಮಿಸಿದ್ದು ಅಧ್ಯಯನದಲ್ಲಿ ತೊಡಗಿದೆ.

ವಿಜ್ಞಾನಿಗಳ ತಂಡ ಚಾರ್ಮಾಡಿ ಘಾಟಿಯಿಂದ 4 ಕಿ.ಮೀ. ದೂರದಲ್ಲಿರುವ ಅಲೇಖಾನ್ ಹೊರಟ್ಟಿ, ಬಾಳೂರು, ಚನ್ನಹಡ್ಲು ಗ್ರಾಮಗಳಿಗೆ ಭೇಟಿ ನೀಡಿ ಆಗಿರುವ ಆನಾಹುತಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಇನ್ನು ಕೆಲವು ದಿನಗಳ ಕಾಲ ಅಧ್ಯಯನ ನಡೆಸಲಿದ್ದಾರೆ. ಭೂ ವಿಜ್ಞಾನಿಗಳು ಮೊದಲ ದಿನ ಅಧ್ಯಯನ ನಡೆಸಿದಾಗ ಎಲ್ಲೆಲ್ಲಿ ಸಣ್ಣ ಸಣ್ಣ ಝರಿಗಳು ಹರಿಯುತ್ತಿದ್ದವೋ ಅಂತಹ ಕಡೆಗಳಲ್ಲಿ ಭಾರೀ ಮಳೆಗೆ ನೀರು ಹರಿದು ಹೋಗಿ ಅನಾಹುತಗಳು ಸಂಭವಿಸಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

Intro:Kn_ckm_01_scientiest visit_av_7202347Body:
ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಜನರನ್ನು ತಲ್ಲಣಗೊಳಿಸಿದ ಮಹಾ ಮಳೆಯ ಪ್ರವಾಹ.ಗುಡ್ಡ ಕುಸಿತದ ಪ್ರದೇಶಕ್ಕೆ ವಿಜ್ಞಾನಿಗಳು ಬೇಡಿ ನೀಡಿ ಆಧ್ಯಯನ ಕೈಗೊಂಡಿದ್ದಾರೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ಭೂ ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್‍ಕುಮಾರ್ ಹಾಗೂ ಚಿಕ್ಕಮಗಳೂರಿನ ಭೂ ವಿಜ್ಞಾನಿಯಾ ದಯಾನಂದ್, ಎಂಜಿನಿಯರ್ ರಾಘವನ್ ತಂಡ ಅಧ್ಯಯನ ಆರಂಭಿಸಿದೆ. ಕಳೆದ 2 ರಿಂದ 12 ರವರೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಾರಿ ಮಳೆ ಹಾಗೂ ಬೆಟ್ಟ ಜರಿದು 10 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಕಾಫಿ, ಅಡಿಕೆ ತೋಟಗಳು, ಗದ್ದೆಗಳು ಜಲಾವೃತವಾಗಿ ಹಲವು ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಮಲೆಮನೆ,ಚನ್ನಹಡ್ಲು.ಆಲೇಖಾನ್ ಹೊರಹಟ್ಟಿ, ಕಳಸ ಸಮೀಪದ ಹಿರೇಬೈಲು,ಮಲ್ಲೇಶ್ವರ ಗುಡ್ಡ ಸೇರಿದಂತೆ ಹಲವು ಕಡೇ ಬೆಟ್ಟಗಳು ಜರಿದಿದ್ರಿಂದ ಆ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೇ ಇದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ ಅಧ್ಯಯನ ನಡೆಸುತ್ತಿದ್ದಾರೆ.ಈ ತಂಡ ಚಾರ್ಮಾಡಿ ಘಾಟ್, ಇಲ್ಲಿಂದ 4 ಕಿ.ಮೀ. ದೂರದಲ್ಲಿರುವ ಅಲೇಖಾನ್ ಹೊರಟ್ಟಿ, ಬಾಳೂರು, ಚನ್ನಹಡ್ಲು ಗ್ರಾಮಗಳಿಗೆ ಭೇಟಿ ನೀಡಿ ಆಗಿರುವ ಆನಾಹುತಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇನ್ನು ಕೆಲವು ದಿನಗಳ ಕಾಲ ಅದ್ಯಯನ ನಡೆಸಲಿದ್ದಾರೆ. ಈ ತಂಡದಲ್ಲಿರುವ ಭೂ ವಿಜ್ಞಾನಿ ಮೊದಲ ದಿನ ಅಧ್ಯಯನ ನಡೆಸಿದಾಗ ಎಲ್ಲಲ್ಲಿ ಸಣ್ಣ ಸಣ್ಣ ಝರಿಗಳು ಹರಿಯುತ್ತಿದ್ದವೋ ಅಂತಹ ಕಡೆಗಳಲ್ಲಿ ಭಾರೀ ಮಳೆಗೆ ನೀರು ಹರಿದು ಹೋಗಿ ಅನಾಹುತಗಳು ಸಂಭವಿಸಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ...

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.