ETV Bharat / state

ಚಿಕ್ಕಮಗಳೂರು: ಅಕ್ರಮವಾಗಿ ಸಾಗಿಸಲಾಗ್ತಿದ್ದ 89,843 ಮೌಲ್ಯದ ಮದ್ಯ ವಶ - ಮದ್ಯ ವಶ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣಾವರದಿಂದ ಮಾಚಗೊಂಡನಹಳ್ಳಿ ಚೆಕ್​ಪೋಸ್ಟ್ ಮೂಲಕ ಸಖರಾಯಪಟ್ಟಣದ ಕಡೆಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 89,843 ಮೌಲ್ಯದ ಮದ್ಯವನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

police
police
author img

By

Published : May 31, 2021, 10:43 PM IST

ಚಿಕ್ಕಮಗಳೂರು: ಬೈಕ್​ಗಳಲ್ಲಿ ಅಕ್ರಮವಾಗಿ ಮದ್ಯ ಸಾಗಿಸುವ ವೇಳೆ ಪೊಲೀಸರು ದಾಳಿ ಮಾಡಿ 89,843 ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣಾವರದಿಂದ ಮಾಚಗೊಂಡನಹಳ್ಳಿ ಚೆಕ್​ಪೋಸ್ಟ್ ಮೂಲಕ ಸಖರಾಯಪಟ್ಟಣದ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಸಿಬ್ಬಂದಿಗೆ ಸ್ಥಳೀಯರಿಂದ ಖಚಿತ ಮಾಹಿತಿ ಬಂದಿತ್ತು.

ಈ ಹಿನ್ನೆಲೆ ಮಾಚಗೊಂಡನಹಳ್ಳಿ ಚೆಕ್​ಪೋಸ್ಟ್ ಬಳಿ ಪಿಎಸ್ಐ ಹಾಗೂ ಸಿಬ್ಬಂದಿ ವಾಹನಗಳನ್ನು ಪರಿಶೀಲಿಸಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ 10 ಜನ ಆರೋಪಿಗಳನ್ನು ಬಂಧಿಸಿ, 9 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, 2.180 ಪ್ಯಾಕೆಟ್ ರಾಜಾ ವಿಸ್ಕಿ, ಹಾಗೂ 376 ಹೈವೇ ಮದ್ಯ, ವಿಸ್ಕಿ ವಶಕ್ಕೆ ಪಡೆದಿದ್ದಾರೆ. ಒಟ್ಟು ರೂ. 89,843 ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳನ್ನು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.