ETV Bharat / state

ಚಿಕ್ಕಮಗಳೂರು: ಕೇವಲ ಒಂದು ಹಾಡಿಗೆ ನಡೆದ ಗಲಾಟೆ... ಕೊಲೆಯಲ್ಲಿ ಅಂತ್ಯ - ಹಾಡಿಗೆ ಕೊಲೆ

ಚಿಕ್ಕಮಗಳೂರಿನ ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಡಿಗೆ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ.

ಚಿಕ್ಕಮಗಳೂರು  ಕೊಲೆ
ಚಿಕ್ಕಮಗಳೂರು ಕೊಲೆ
author img

By

Published : Jun 5, 2023, 8:04 AM IST

ಚಿಕ್ಕಮಗಳೂರು: ನೂತನ ಶಾಸಕರ ಅಭಿನಂದನಾ ಕಾರ್ಯಾಕ್ರಮದಲ್ಲಿ ಕೇವಲ ಒಂದು ಸಿನಿಮಾ ಹಾಡಿಗೆ ಕೊಲೆ ನಡೆದಿರುವ ಘಟನೆ ಶನಿವಾರ ತರೀಕೆರೆ ಪಟ್ಟಣದಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಚೌಡೇಶ್ವರಿ ಬೀದಿಯ ನಿವಾಸಿ ವರುಣ್ ಹತ್ಯೆಯಾದ ಯುವಕ.

ಘಟನೆ ಹಿನ್ನೆಲೆ: ಕಾಂಗ್ರೆಸ್ ಅಭ್ಯರ್ಥಿ ಜಿ.ಹೆಚ್.ಶ್ರೀನಿವಾಸ್ ಗೆಲುವು ಸಾಧಿಸಿದ ಹಿನ್ನೆಲೆ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ತರೀಕೆರೆ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಕೂಡ ಇತ್ತು. ಕಾರ್ಯಕ್ರಮಕ್ಕೆ ನೆರೆದಿದ್ದ ಎಲ್ಲರೂ ಮಧ್ಯಾಹ್ನವೇ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದ್ದರು.

ಈ ವೇಳೆ ಮೃತ ವರುಣ್​ ಹಾಗೂ ಕೊಲೆ ಆರೋಪಿ ಮೂರ್ತಿ ತಂಡದ ಮಧ್ಯೆ ಒಂದೇ ಒಂದು ಸಿನಿಮಾ ಹಾಡಿಗೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ಸ್ವಲ್ಪದರಲ್ಲೇ ಮುಗಿದಿದ್ದು ಎಲ್ಲರೂ ಸುಮ್ಮನಾಗಿದ್ದರು. ಆದರೆ, ರಾತ್ರಿ 9.30 ರ ವೇಳೆಗೆ ಹಾಡಿನ ಗಲಾಟೆ ನೆನಪಾಗಿ ಮತ್ತೆ ಕಾಳಗ ಮುಂದುವರೆಸಿದ್ದಾರೆ. ಆಗ ಜಗಳ ವಿಕೋಪಕ್ಕೆ ತಿರುಗಿ ಮೂರ್ತಿ ತಂಡದವರು ವರುಣ್ ಪಕ್ಕೆಗೆ ಇರಿದು, ಮಂಜು ಹಾಗೂ ಸಂಜು ಎಂಬುವರ ಕಾಲಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಪಕ್ಕೆಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗುತ್ತಿದ್ದ 28 ವರ್ಷದ ವರುಣ್​ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತನ ಸಂಬಂಧಿಗಳು ಕೊಲೆ ಆರೋಪಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಪರ್ಯಾಸವೆಂದರೆ ಮೃತ ವರುಣ್ ಹಾಗೂ ಕೊಲೆ ಆರೋಪಿ 12 ಜನ ಕೂಡ ಸ್ನೇಹಿತರೇ. ಇವರ ಸ್ನೇಹದ ಬಗ್ಗೆ ಇಡೀ ಊರೇ ಮಾತನಾಡುತ್ತೆ. ಆದರೆ ಇಂಥ ಗೆಳೆಯರ ಮಧ್ಯೆ ಹಾಡಿನ ವಿಚಾರದಲ್ಲಿ ಆರಂಭವಾದ ಆ ವಿವಾದ ಕೊಲೆಯಲ್ಲಿ ಅಂತ್ಯವಾಗಿರೋದು ನಿಜಕ್ಕೂ ದುರಂತ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಿ.ಎಚ್. ಶ್ರೀನಿವಾಸ್ ಯುವಕನ ಸಾವಿನ ಸಂತಾಪ ಸೂಚಿಸಿದ್ದಾರೆ.‌ ನಮ್ಮ ಅಪ್ಪಟ ಕಾರ್ಯಕರ್ತ ಯುವಕ ವರುಣ್,​ ರಾತ್ರಿ ಸಣ್ಣ ವಿಚಾರಕ್ಕೆ ಗಲಾಟೆ ನಡೆದು ದುಷ್ಕರ್ಮಿಗಳು ಚಾಕು ಇರಿದ ಪರಿಣಾಮ ಸಾವನ್ನಪ್ಪಿದ್ದಾರೆ. ಆ ಆರೋಪಿಗಳು ಕೂಡ ನಮ್ಮ ಕಾಂಗ್ರೆಸ್​ ಪಕ್ಷದವರೇ. ಅವರೆಲ್ಲರೂ ಸ್ನೇಹಿತರೇ. ಹಾಡಿನ ವಿಚಾರ ಶುರುವಾದ ಗಲಾಟೆ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ದೂರದಲ್ಲಿ ಈ ಘಟನೆ ನಡೆದಿದೆ.

ನಮಗೆ ಗೊತ್ತಾಗುತ್ತಿದ್ದರೆ ಅಥವಾ ಕಾರ್ಯಕರ್ತರು ನೋಡುತ್ತಿದ್ದರೆ ಉಳಿಸಬಹುದಿತ್ತು. ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಭಾಷಣ ಮಾಡುತ್ತಿದ್ದರು ಆ ವೇಳೆ ಈ ಘಟನೆ ನಡೆದಿದೆ. 12 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಏಳು ಜನರನ್ನು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿ, ದೇವರು ಮೃತನ ಕುಟುಂಬಕ್ಕೆ ನೋವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಂಡಿದ್ದಾರೆ.

ಇನ್ನು ವರುಣ್​ ಸ್ನೇಹಿತ ಘಟನೆ ಕುರಿತು ತಿಳಿಸಿದ್ದಾನೆ. ವರುಣ್ ಬಹಳ ಬಡ ಕುಟುಂಬದಿಂದ ಬಂದವನು. ರೈತಾಪಿ ವರ್ಗದವನು. ಹೊಸದಾಗಿ ಟ್ರ್ಯಾಕ್ಟರ್​ ಕೂಡ ಖರೀದಿಸಿದ್ದ. ಅದರಲ್ಲೇ ಜೀವನವನ್ನು ನಡೆಸುತ್ತಿದ್ದ. ಸ್ನೇಹಿತರಲ್ಲಿ ಒಂದು ಹಾಡಿಗೆ ಗಲಾಟೆಯಾಗಿ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಎಂದು ಯಾರು ಭಾವಿಸಿರಲಿಲ್ಲ. ಬಹಳ ದುಃಖವಾಗುತ್ತೇ ಈ ಘಟನೆ ಬಗ್ಗೆ ಮಾತನಾಡಲು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕಿ ಸಾವು, ಈಜಲು ಹೋಗಿ ನೀರಲ್ಲಿ ಮುಳುಗಿದ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.